ಬಾಗಲಕೋಟ, ಹುಬ್ಬಳ್ಳಿಯಲ್ಲಿ ನಾಳೆ ಪ್ರತಿಭಟನೆ Protest

Protest ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ.
Protest ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ.
Published on
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲು ತೂರಾಟ ಖಂಡಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಾಗಲಕೋಟ ಹಾಗೂ ಹುಬ್ಬಳ್ಳಿಯ ಅಂಬೇಡ್ಕರ ವೃತ್ತದಲ್ಲಿ ಫೆ. 26ರಂದು ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳ ಜತೆಗೆ ಮಸೀದಿಯ ಮೌಲ್ವಿಗಳನ್ನೂ ಬಂಧಿಸಿ, ಮಸೀದಿಗೆ ಬೀಗ ಜಡಿಯಬೇಕು ಎಂದು ಒತ್ತಾಯ ಮಾಡಿದರು.
ಬಾಗಲಕೋಟ ಜಿಲ್ಲೆ ಪ್ರವೇಶಕ್ಕೆ ಒಂದು ತಿಂಗಳವರೆಗೆ ನನಗೆ ನಿಷೇಧಾಜ್ಞೆ ವಿಧಿಸಲಾಗಿದೆ. ನಿಷೇಧಾಜ್ಞೆ ತೆರವಿಗೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಫೆ. 26ರೊಳಗೆ ನಿಷೇಧಾಜ್ಞೆ ತೆರವುಗೊಂಡರೆ ಬಾಗಲಕೋಟೆಗೆ ತೆರಳಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ. ಇಲ್ಲದಿದ್ದರೆ ಹುಬ್ಬಳ್ಳಿಯ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಎಲ್ಲ ಹಿಂದು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿವೆ ಎಂದು ತಿಳಿಸಿದರು.
ಬಾಗಲಕೋಟ ಕಲ್ಲು ತೂರಾಟದ ಸಮಯದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗೂ ಕಲ್ಲುಗಳು ತಗುಲಿ, ರಕ್ತಸ್ರಾವವಾಗಿದೆ. ಆದರೂ, ಪೊಲೀಸರು ಕಲ್ಲು ತೂರಾಟ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಂಡಿಲ್ಲ. ನಾಲ್ಕೈದು ಮುಸ್ಲಿಂರನ್ನು ಬಂಧಿಸಿ, ಸರ್ಕಾರ ಸುಮ್ಮನಾಗಿದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಹಿಂದೂಗಳ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದರೆ ಸಹಿಸುವುದಿಲ್ಲ. ಹಿಂದೂಗಳೆಲ್ಲ ಸೇರಿ ಘಟನಾ ಸ್ಥಳದಲ್ಲಿಯೇ ಅವರಿಗೆ ಪಾಠ ಕಲಿಸುತ್ತೇವೆ.
ನಮಗೆ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಇಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಸೀದಿ ಮೇಲಿನ ಮೈಕ್​ಗಳನ್ನು ನಿಷೇಧಿಸಲಿಲ್ಲ. ಹೋರಾಟ ನಡೆಸಿದ ನಮ್ಮ ಕಾರ್ಯಕರ್ತರ ಮೇಲೆಯೇ ಹಿಂದಿನ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿತ್ತು ಎಂದು ಹೇಳಿದರು.
ಹಿಂದೂ ಸಂಘಟನೆಗಳ ಶಿವಾನಂದ ಸತ್ತಗೇರಿ, ವಿಶಾಲ ಜಾಧವ, ಮಹಾಂತೇಶ ಗೊಂಗಳಿವಾಡ, ಶ್ರೀಧರ ಕಲಬುರ್ಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net