ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಪ್ರತಿಭಟನೆ

ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಪ್ರತಿಭಟನೆ
ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಪ್ರತಿಭಟನೆ
Published on
ಧಾರವಾಡ: ವೆನೆಜುವೆಲಾ ಮೇಲಿನ ಅಮೆರಿಕನ್ ಮಿಲಿಟರಿ ದಾಳಿ ಖಂಡಿಸಿ ಸಿಪಿಐ(ಎಂ), ಎಸ್‌ಯುಸಿಐ(ಸಿ), ಸಿಪಿಐ ಪಕ್ಷಗಳಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ವಿವೇಕಾನಂದ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಯುದ್ಧೋನ್ಮಾದಿ ಅಮೆರಿಕನ್ ಸಾಮ್ರಾಜ್ಯಶಾಹಿಗಳು ವೆನೆಜುವೆಲಾದ ಮೇಲೆ ನಡೆಸಿರುವ ದಾಳಿ ಅತ್ಯಂತ ಹೇಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ(ಎಂ) ಜಿಲ್ಲಾ ಮುಖಂಡ ಬಿ.ಎನ್.ಪೂಜಾರ ಮಾತನಾಡಿ, ಈ ದಾಳಿಯು ಕೇವಲ ವೆನೆಜುವೆಲಾದ ಮೇಲಷ್ಟೇ ಅಲ್ಲ, ಇಡೀ ಲ್ಯಾಟಿನ್ ಅಮೆರಿಕದ ಮೇಲೆ ನಡೆದ ದಾಳಿಯಾಗಿದೆ. ಅಲ್ಲಿನ ಎಲ್ಲ ದೇಶಗಳನ್ನು ಬಂದೂಕಿನ ಮೊನೆಯಲ್ಲಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಈ ದಾಳಿಯ ಹಿಂದಿನ ಉದ್ದೇಶವಾಗಿದೆ. ಒಂದು ಸಾರ್ವಭೌಮ ರಾಷ್ಟçದ ಒಳಗೆ ನುಗ್ಗುವುದು, ಸಂವಿಧಾನಿಕವಾಗಿ ಆಯ್ಕೆಯಾದ ನಾಯಕರನ್ನು ಅಪಹರಣ ಮಾಡುವುದು ಸಾಮಾನ್ಯವಾಗಿ ಬಿಟ್ಟರೆ, ಜಗತ್ತಿನ ಯಾವುದೇ ಸಾರ್ವಭೌಮ ರಾಷ್ಟçಗಳಿಗೂ ಭದ್ರತೆ ಇಲ್ಲದಂತಾಗುತ್ತದೆ. ಪ್ರಪಂಚದಾದ್ಯತದ ಸಾಮಾಜ್ಯಶಾಹಿ ವಿರೋಧಿ, ಯುದ್ಧ ವಿರೋಧಿ ಮತ್ತು ಶಾಂತಿಪ್ರಿಯ ಜನರು ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರದ ಈ ಅತ್ಯಂತ ಕ್ರೂರ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಕೃತ್ಯವನ್ನು ಖಂಡಿಸುವುದರಿದ ಭಾರತ ಸರ್ಕಾರ ದೂರ ಉಳಿದಿದೆ ಎಂಬುದು ತೀವ್ರ ಆತಂಕವನ್ನುoಟು ಮಾಡಿದೆ ಎಂದರು.
ಎಸ್‌ಯುಸಿಐ(ಸಿ)ರಾಜ್ಯ ಸಮಿತಿ ಕಾರ್ಯದರ್ಶಿ ಶಶಿಧರ್ ಎಂ. ಮಾತನಾಡಿ, ವಾಸ್ತವವಾಗಿ, ಅಮೆರಿಕದ ಸಾಮ್ರಾಜ್ಯಶಾಹಿ ಆಳ್ವಿಕರು ವೆನೆಜುವೆಲಾದ ಅಪಾರ ತೈಲ ಸಂಪನ್ಮೂಲಗಳನ್ನು ಕಬಳಿಸುವ ಉದ್ದೇಶದಿಂದ ಮಡುರೊ ಅವರನ್ನು ಅಧಿಕಾರದಿಂದ ಬಲವಂತವಾಗಿ ಕೆಳಗಿಳಿಸಿ, ಅಲ್ಲಿ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸಲು ಬಹಳ ದಿನಗಳಿಂದ ರಹಸ್ಯವಾಗಿ ಸಂಚು ರೂಪಿಸುತ್ತಿದ್ದರು. ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಮಹೇಶ ಪತ್ತಾರ, ಬಿ.ಎಸ್. ಸೊಪ್ಪಿನ್, ಎ.ಎಂ. ಖಾನ್, ವಿ.ನಾಗಮ್ಮಾಳ್, ಗಂಗಾಧರ ಬಡಿಗೇರ, ಶರಣಬಸವ ಗೋನವಾರ, ಮಧುಲತಾ ಗೌಡರ, ಭವಾನಿ ಶಂಕರ್ ಎಸ್. ಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net