ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಗೋಕಳ್ಳರಿಗೆ ರಕ್ಷಣೆ ಕೊಡುವುದರ ಉದ್ದೇಶದಿಂದ ತಿದ್ದುಪಡಿ ತರಲು ಹೊರಟಿದೆ. ಸಾವಿರಾರು ವರ್ಷದಿಂದ ಗೋವುಗಳನ್ನು ಪೂಜೆ ಮಾಡಲಾಗುತ್ತಿದೆ. ಕೃಷಿ, ಕೈಗೆ ಕೆಲಸ, ಆರ್ಥಿಕ ಬೆಂಬಲ, ಔಷಧವನ್ನು ಗೋಮಾತೆ ಕೊಡುತ್ತಿದ್ದಾಳೆ. ಮುಸ್ಲಿಮರ ತುಷ್ಟೀಕರಣಕ್ಕಾಗಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ -2020 ಅನ್ನು ಸಡಿಲಗೊಳಿಸಿ ತಿದ್ದುಪಡಿ ಮಾಡಲು ಹೊರಟಿದೆ. ತಿದ್ದುಪಡಿ ಮಾಡಿದ್ದೇ ಆದಲ್ಲಿ, ಕಾಂಗ್ರೆಸ್ ಸರ್ವನಾಶವಾಗುತ್ತದೆ. ಕೂಡಲೇ ತಿದ್ದಪಡಿ ಮಸೂದೆಯನ್ನು ವಾಪಸ್ ತೆಗೆದುಕೊಳ್ಳಬೇಕು. ಬಿಜೆಪಿ ಮತ್ತು ಜೆಡಿಎಸ್‌ನವರು ಸದನವನ್ನು ಬಹಿಷ್ಕರಿಸಿ ಹೊರಬರಬೇಕು. ಒಂದು ವೇಳೆ ಪಾಸ್ ಮಾಡಿದ್ದೇ ಆದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.