ಕಾರ್ವಿುಕ ವಿರೋಧಿ ನೀತಿ ಕೈಬಿಡಲು ಒತ್ತಾಯಿಸಿ ಪ್ರತಿಭಟನೆ protest

protest ರೈತ ಹಾಗೂ ಕಾರ್ವಿುಕ ವಿರೋಧಿ ನೀತಿ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿ ವಿವಿಧ ಸಂಘಟನೆಗಳು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದವು.
protest ರೈತ ಹಾಗೂ ಕಾರ್ವಿುಕ ವಿರೋಧಿ ನೀತಿ ಕೈಬಿಡುವಂತೆ ಸರ್ಕಾರವನ್ನು ಒತ್ತಾಯಿಸಿ ವಿವಿಧ ಸಂಘಟನೆಗಳು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದವು.
Published on

ಪ್ರಮುಖ ಮುಖ್ಯಾಂಶಗಳು

  • ವಿಬಿ ಗ್ರಾಮ್ ಜಿ ಕಾಯ್ದೆ ರದ್ದುಪಡಿಸಬೇಕು.
  • ಭೂ ಕಬಳಿಕೆ ಕೂಡಲೇ ನಿಲ್ಲಬೇಕು.
  • ಉದ್ಯೋಗ ಖಾತ್ರಿ ಯೋಜನೆಯನ್ನು ಮರುಸ್ಥಾಪಿಸಬೇಕು.

ಬಲವಂತದ ಅನ್ಯಾಯದ ಭೂ ಸ್ವಾಧೀನ, ಕಾರ್ಪೆರೇಟ್ ಭೂ ಕಬಳಿಕೆ ಕೂಡಲೇ ನಿಲ್ಲಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ವಿುಕ ಸಂಹಿತೆಗಳನ್ನು ಹಿಂಪಡೆಯಬೇಕು. 

ರಾಜ್ಯದಲ್ಲಿ ಪರಿಷ್ಕರಿಸಿ ಪ್ರಕಟಿಸಲಾದ ಕನಿಷ್ಟ ವೇತನವನ್ನು ಮಾಲೀಕರ ಲಾಭಿಗೆ ಮಣಿಯದೇ ಸರ್ಕಾರ ಜಾರಿಮಾಡಬೇಕು ಎಂದು ಆಗ್ರಹಿಸಿದರು. 

ವಿಬಿ ಗ್ರಾಮ್ ಜಿ ಕಾಯ್ದೆ ರದ್ದುಪಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಮರುಸ್ಥಾಪಿಸಬೇಕು. ಅಸಂಘಟಿತ ಕಾರ್ವಿುಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ತಹಸೀಲ್ದಾರ ಕಚೇರಿ ಅಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು. 

ಮಹೇಶ ಪತ್ತಾರ, ಬಸೀರ ಮುಧೋಳ, ಬಿ.ಐ. ಈಳೀಗೇರ, ಚನ್ನಮ್ಮ ಡೊಳ್ಳಿನ, ಸುನಂದಾ ಚಿಗರಿ, ಬಸವರಾಜ ದೇವರಮನಿ, ಯೂಸುಫ್ ಬಳ್ಳಾರಿ, ಚಿದಾನಂದ ಸವದತ್ತಿ, ಬಸವಣ್ಣೆಪ್ಪ ನೀರಲಗಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net