ಕನಿಷ್ಠ ವೇತನ ಅಧಿಸೂಚನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಭಾರತೀಯ ಮಜ್ದೂರ್​ ಸಂಘದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಭಾರತೀಯ ಮಜ್ದೂರ್​ ಸಂಘದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
Published on

ರಾಜ್ಯ ಸರ್ಕಾರ ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಜಾರಿ ಮಾಡಲು ಒತ್ತಾಯಿಸಿ ಭಾರತೀಯ ಮಜ್ದೂರ್​ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ವಿವಿಧ ಸಂಗಳ ಹೋರಾಟದ ಲವಾಗಿ ಸರ್ಕಾರ 2026ರ ಮೇನಲ್ಲಿ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಿದೆ. ಇದೀಗ ಬಂಡವಾಳಶಾಹಿ ಆಡಳಿತ ಮಂಡಳಿಗಳ ಒತ್ತಡಕ್ಕೆ ಮಣಿದು ಅಧಿಸೂಚನೆ ಹಿಂಪಡೆಯುವ ಯತ್ನ ನಡೆಸಿರುವುದು ಖಂಡನೀಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಮಿರ್ಕ ವಿರೋಧಿ ನೀತಿಯ ವಿರುದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಇಪಿಎಫ್​ ಪಿಂಚಣಿಯನ್ನು 1 ಸಾವಿರ ರೂ.ಗಳಿಂದ 7,500 ರೂ.ಗೆ ಹೆಚ್ಚಿಸಬೇಕು. ಇಎಸ್​ಐ ವ್ಯಾಪ್ತಿಯ ಮಿತಿಯನ್ನು 21 ಸಾವಿರದಿಂದ 42 ಸಾವಿರಕ್ಕೆ ಹೆಚ್ಚಿಸಬೇಕು. ಇಪಿಎಫ್​ ವಂತಿಗೆ ಮಿತಿ 30 ಸಾವಿರ ರೂ.ಗೆ ಏರಿಕೆ ಆಗಬೇಕು. 7 ಸಾವಿರ ರೂ. ಬದಲು 18,000 ರೂ. ಬೋನಸ್​ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್​ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾಮಿರ್ಕರ ಮಾಸಿಕ ಗೌರವಧನ ಹೆಚ್ಚಿಸಬೇಕು. ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಪದ್ಧತಿ ಕೈ ಬಿಡಬೇಕು. ಕಟ್ಟಡ ಕಾಮಿರ್ಕರ ಮಕ್ಕಳ ಶೈಕ್ಷಣಿಕ ಸಹಾಯಧನ ಹೆಚ್ಚಿಸಿ ನಿವೃತ್ತಿ ಪಿಂಚಣಿ ಏರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾರತೀಯ ಮಜ್ದೂರ್​ ಸಂಘದ ರಾಜ್ಯ ಉಪ ಪ್ರಧಾನ ಕಾರ್ಯದಶಿರ್ ಸುರೇಶ ನಾಡಗೇರ, ಜಿಲ್ಲಾಧ್ಯಕ್ಷ ನರೇಂದ್ರ ಜಾಧವ, ಬಲಭೀಮ ಪೋದ್ದಾರ, ಬಾಬುರಾವ್​ ಮನುಪಾಟಿ, ಶಿವಪ್ಪ ಚಲವಾದಿ, ತಾಹೀರಾಬಾನು ಮುಲ್ಲಾ, ಯೂಸುಫ್​ ಹುಲ್ಲೂರ, ಇತರರಿದ್ದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net