

ಪ್ರಮುಖ ಮುಖ್ಯಾಂಶಗಳು
ಉದ್ಯೋಗಾಕಾಂಕ್ಷಿಗಳ ನ್ಯಾಯಯುತ ಬೇಡಿಕೆ ಮುಂದಿಟ್ಟು ಹೋರಾಟಕ್ಕಿಳಿದರೆ, ಸರ್ಕಾರವು ಪೊಲೀಸರನ್ನು ಮುಂದಿಟ್ಟುಕೊಡು ಪ್ರತಿಭಟನೆ ಹತ್ತಿಕ್ಕಿದೆ. ಧಾರವಾಡದಲ್ಲಿ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತಾಗಿದೆ. ಪೊಲೀಸ್ ಆಯುಕ್ತರು ಧಾರವಾಡದ ವಿವಿಧ ಕೋಚಿಂಗ್ ಸೆಂಟರ್, ಗ್ರಂಥಾಲಯ, ಕಾಲೇಜುಗಳಿಗೆ ಹೋಗಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಈ ಕೆಲಸಕ್ಕೆ ಇವರಿಗೆ ಸಮಯ ಇರುತ್ತದೆ. ಪ್ರತಿಭಟನೆಗೆ ಭದ್ರತೆ ಕಲ್ಪಿಸುವುದಕ್ಕೆ ಏಕೆ ಆಗಿಲ್ಲ? ನಾವು ಇಷ್ಟಕ್ಕೆ ಪ್ರತಿಭಟನೆ ಕೈ ಬಿಡುವುದಿಲ್ಲ. ಇದನ್ನು ಜನಾಂದೋಲನ ರೀತಿಯಲ್ಲಿ ರಾಜ್ಯವ್ಯಾಪಿ ವಿಸ್ತರಿಸುತ್ತೇವೆ.