ವಿದ್ಯಾಥಿರ್ಗಳ ಮೇಲೆ ಲಾಠಿ ಚಾರ್ಜ್​ ಖಂಡಿಸಿ ಪ್ರತಿಭಟನೆ

ದೆಹಲಿಯ ಜಂತರ್​ ಮಂತರ್​ನಲ್ಲಿ ಹೋರಾಟನಿರತ ವಿದ್ಯಾಥಿರ್ಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ ನಡೆಸಿರುವುದನ್ನು ಖಂಡಿಸಿ ಎಐಡಿವೈಒ, ಎಐಎಂಎಸ್​ಎಸ್​ ಸಂಟನೆಗಳಿಂದ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ದೆಹಲಿಯ ಜಂತರ್​ ಮಂತರ್​ನಲ್ಲಿ ಹೋರಾಟನಿರತ ವಿದ್ಯಾಥಿರ್ಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ ನಡೆಸಿರುವುದನ್ನು ಖಂಡಿಸಿ ಎಐಡಿವೈಒ, ಎಐಎಂಎಸ್​ಎಸ್​ ಸಂಟನೆಗಳಿಂದ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
Published on
ಧಾರವಾಡ: ದೆಹಲಿಯ ಜಂತರ್​ ಮಂತರ್​ನಲ್ಲಿ ಹೋರಾಟನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ ನಡೆಸಿರುವುದನ್ನು ಖಂಡಿಸಿ, ಬಂಧಿತ ಹೋರಾಟಗಾರರನ್ನು ಬಿಡುಗಡೆ ಮಾಡಲು ಆಗ್ರಹಿಸಿ ಎಐಡಿವೈಒ, ಎಐಎಂಎಸ್​ಎಸ್​ ಸಂಟನೆಗಳಿಂದ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಆಲ್​ ಇಂಡಿಯಾ ಡೆಮೊಕ್ರೆಟಿಕ್​ ಯೂತ್​ ಆರ್ಗನೈಸೇಶನ್​ ಹಾಗೂ ಅಖಿಲ ಭಾರತ ಮಹಿಳಾ ಸಾಂಸತಿಕ ಸಂಟನೆಗಳು ಸೋನಮ್​ ವಾಂಗ್​ಚುಕ್​ರ ಹೋರಾಟ ಬೆಂಬಲಿಸಿದವು.
ಮಧುಲತಾ ಗೌಡರ ಮಾತನಾಡಿ, ಕೇಂದ್ರ ಸರ್ಕಾರ ಪೊಲೀಸರನ್ನು ಬಳಸಿಕೊಂಡು ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಬಲವಂತವಾಗಿ ಹತ್ತಿಕ್ಕುವ ಉದ್ದೇಶದಿಂದ ದಮನಕಾರಿ ಕ್ರಮ ಕೈಗೊಂಡಿದೆ. ಒಂದು ದಶಕದಲ್ಲಿ ದೇಶಾದ್ಯಂತ 80ಕ್ಕೂ ಹೆಚ್ಚು ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ವರದಿಯಾಗಿವೆ. ಇದು ವಿದ್ಯಾಥಿರ್ಗಳು ಮತ್ತು ಯುವಜನರ ಕನಸುಗಳನ್ನು ನುಚ್ಚುನೂರಾಗಿಸಿದೆ. ಒತ್ತಡದ ಪರಿಣಾಮ 21ಕ್ಕೂ ಹೆಚ್ಚು ವಿದ್ಯಾಥಿರ್ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಹೋರಾಟಗಾರರ ನ್ಯಾಯಸಮ್ಮತ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಭವಾನಿಶಂಕರ್​ ಗೌಡ ಮಾತನಾಡಿ, ಕೇಂದ್ರ ಸಚಿವ ಧಮೇಂರ್ದ್ರ ಪ್ರಧಾನ್​ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಗಂಗೂಬಾಯಿ ಕೊಕರೆ, ದೇವಮ್ಮ ದೇವತ್ಕಲ್​, ಯಲ್ಲಪ್ಪ ದೊರೆ, ಪ್ರತಾಪ್​ಸಿಂಗ್​ ಜಾಧವ, ಪುನೀತ್​ ಹೊನ್ನಣ್ಣನವರ್​, ವಿಜಯಲಕ್ಷಿ$್ಮ ಹಿರೇಮಠ, ಸಿದ್ದಮ್ಮ ಹುಗ್ಗಿ, ಅನುಷಾ ಚನ್ನಗೌಡರ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net