ಧಾರವಾಡ: ಮಲಹೊರುವ ವೃತ್ತಿಯಲ್ಲಿ ನೇಮಕ ನಿಷೇಧ ಹಾಗೂ ಪುನರ್ವಸತಿ ಕಾಯ್ದೆ 2013ಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಟಕದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
2013ರ ಕಾಯ್ದೆಯು ಮಲಹೊರುವ ಪದ್ಧತಿ ಮತ್ತು ಮಲ ವಿಲೇವಾರಿ ವೃತ್ತಿಯನ್ನು ನಿಷೇಧಿಸಿದೆ. ಮಲಸ್ವಚ್ಛತಾ ಕಾರ್ಯವನ್ನು ಆಧುನಿಕ ಯಂತ್ರೋಪಕರಣಗಳ ಮೂಲಕವೇ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿ ಕಾಮಿರ್ಕರ ಜೀವ, ಆರೋಗ್ಯ ಮತ್ತು ನತೆಯನ್ನು ರಕ್ಷಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಸೂಕ್ತ ಯಂತ್ರೋಪಕರಣಗಳನ್ನು ತಕ್ಷಣ ಅಳವಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮ್ಯಾನ್ಯುಯಲ್ ಸ್ಕಾ ್ಯವೆಂಜಿಂಗ್ಗಳ ಸಮಗ್ರ, ಪಾರದರ್ಶಕ ಮತ್ತು ನಿಯಮಾನುಸಾರ ಸಮೀಕ್ಷೆ ನಡೆಸಬೇಕು. ಮನೆ-, ನಿವೇಶನ ಇಲ್ಲದ ಕುಟುಂಬಗಳಿಗೆ ಉಚಿತ ನಿವೇಶನ ಅಥವಾ ಪಕ್ಕಾ ಮನೆ ಒದಗಿಸಬೇಕು. ಗುರುತಿಸಲ್ಪಟ್ಟ ಎಲ್ಲ ಕುಟುಂಬಗಳಿಗೆ ಆರೋಗ್ಯ ವಿಮೆ ಮತ್ತು ಆರೋಗ್ಯ ಕಾರ್ಡ್ ನೀಡಿ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಕೋರಿದರು.
ಕೆಲಸ ಮಾಡಲು ಅಸಮರ್ಥರಿಗೆ ಸೂಕ್ತ ಮಾಸಿಕ ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು. ಮಲದ ಗುಂಡಿಗಳಲ್ಲಿ ಉಸಿರುಗಟ್ಟಿ ಮೃತಪಟ್ಟವರ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಸೇರಿ ಸೂಕ್ತ ಸಾಮಾಜಿಕ ಯೋಜನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಸಂಟನೆ ರಾಜ್ಯ ಸಂಚಾಲಕ ಕೆ.ಬಿ. ಓಬಳೇಶ, ರಾಜ್ಯ ಸಮಿತಿ ಸದಸ್ಯರಾದ ವಿಜಯ್ ಗುಂಟ್ರಾಳ, ಆರ್.ವಿ. ಚಂದ್ರಶೇಖರ, ಲಕ್ಷಿ$್ಮ ಮಾದರ, ಕನಕಪ್ಪ ಕೊಟಬಾಗಿ, ಪದ್ಮ ಪ್ರತಿಭಟನೆಯಲ್ಲಿದ್ದರು.