ಧಾರವಾಡ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪರ ಮತ ಚಲಾಯಿಸದ ವಿಪಕ್ಷಗಳ ವಿರುದ್ಧ ಶಿವಸೇನಾ ಪಕ್ಷದ ವತಿಯಿಂದ ನಗರದ ವಿವೇಕಾನಂದ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಶಾಸಕಾಂಗದಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಬೇಕಾದದ್ದು ಸುಮಾರು 70 ವರ್ಷಗಳ ಆಶಯವಾಗಿದೆ. ಅದಕ್ಕೆ ಪೂರಕವಾಗಿ ಎನ್ಡಿಎ ಲೋಕಸಭೆಯಲ್ಲಿ ಮತಕ್ಕೆ ಹಾಕಿದಾಗ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಸೇರಿ ಪ್ರತಿಪಕ್ಷಗಳು ವಿರೋಧಿಸಿ ಮತ ಚಲಾಯಿಸಿವೆ. ಈ ಮೂಲಕ ಮಹಿಳೆಯರ ಹಕ್ಕುಗಳಿಗೆ ದ್ರೋಹ ಬಗೆದಿವೆ ಎಂದು ಶಿವಸೇನಾ ರಾಜ್ಯ ವಕ್ತಾರ ಎಸ್. ಭಾಸ್ಕರನ್ ಹೇಳಿದರು.
ರಾಜ್ಯ ಪ್ರಧಾನ ಕಾರ್ಯದಶಿರ್ ಗಂಗಾಧರ್ ಕುಲಕಣಿರ್ ಮಾತನಾಡಿ, ಈ ದ್ರೋಹಕ್ಕೆ ಬರುವ ಚುನಾವಣೆಗಳಲ್ಲಿ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯೆ ಆರತಿ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದಶಿರ್ ಭರತ್ ಸಾವಂತ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಜೋಶಿ, ನಗರ ಅಧ್ಯಕ್ಷ ನವೀನ್ ರಾಠಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚಾಣಕ್ಯ, ನಗರ ಉಪಾಧ್ಯಕ್ಷ ಅಕ್ಷಯ ಕದಂ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.