ಧಾರವಾಡ ಪ್ರತ್ಯೇಕ ಪಾಲಿಕೆ ರಚನೆಯ ಕೂಗಿಗೆ ವಿವಿಧ ಸಂಘಟನೆಗಳು ಮುಂಚೂಣಿಗೆ ಬಂದು ಧ್ವನಿಗೂಡಿಸಿದವು. ಹೋಟೆಲ್ ಮಾಲೀಕರ ಸಂಘದ ಮಹೇಶ ಶೆಟ್ಟಿ, ಗಿರೀಶ ಶೆಟ್ಟಿ, ಇತರರು ಹೋರಾಟಕ್ಕೆ ಸಾಥ್ ನೀಡಿದರು. ಕರ್ನಾಟಕ ವಿದ್ಯುತ್ ಗುತ್ತಿಗೆದಾರರ ಸಂಘದ ಪ್ರೇಮಸಾಗರ ಗಸ್ತೆ, ಮೆಹಬೂಬ ಮುಲ್ಲಾನವರ ಹಾಗೂ ಮಂಜೂರ್ಖಾನ್ ಭಾಗವಹಿಸಿದರು. ಪ್ರಶಾಂತನಗರದ ಕಲ್ಯಾಣ ಸಂಘದ ಬಾಬಣ್ಣ ಇಳಗೇರ ತಮ್ಮ ಸದಸ್ಯರೊಂದಿಗೆ ಪಾಲ್ಗೊಂಡಿದ್ದರು.