(protest) ಕೇಶ್ವಾಪುರ ಠಾಣೆ ಮುಂದೆ ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ಮುಂದೆ ಅಳವಡಿಸಿದ್ದ ಬ್ಯಾರಿಕೇಡ್ ಕಿತ್ತು ಬಿಜೆಪಿ ಕಾರ್ಯಕರ್ತರು ಬುಧವಾರ ಆಕ್ರೋಶ (protest) ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ಮುಂದೆ ಅಳವಡಿಸಿದ್ದ ಬ್ಯಾರಿಕೇಡ್ ಕಿತ್ತು ಬಿಜೆಪಿ ಕಾರ್ಯಕರ್ತರು ಬುಧವಾರ ಆಕ್ರೋಶ (protest) ವ್ಯಕ್ತಪಡಿಸಿದರು.
Published on
ಹುಬ್ಬಳ್ಳಿ: ಮಹಿಳೆ ವಿವಸ್ತ್ರಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯೆ ಸುವರ್ಣ ಕಲ್ಕುಂಟ್ಲ ಅವರನ್ನು ಬಂಧಿಸಬೇಕು. ಕರ್ತವ್ಯಲೋಪ ಎಸಗಿದ ಕೇಶ್ವಾಪುರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಎಸ್. ಹಟ್ಟಿ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ ನೇತೃತ್ವದಲ್ಲಿ ಕೇಶ್ವಾಪುರ ಠಾಣೆ ಮುಂದೆ ಪ್ರತಿಭಟನೆ (protest) ನಡೆಯಿತು.
ಇದಕ್ಕೂ ಮೊದಲು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಜಾತ ಹಂಡಿ ಅವರ ಮನೆಗೆ ಮಧ್ಯೆ ರಾತ್ರಿ ತೆರಳಿ ಬಂಧಿಸುವ ಅಗತ್ಯವೇನಿತ್ತು? ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಾಗಿ ನಿಯೋಜಿಸಿರಲಿಲ್ಲ. ಇದರಲ್ಲಿ ಇನ್‌ಸ್ಪೆಕ್ಟರ್ ಕೆ.ಎಸ್. ಹಟ್ಟಿ ಅವರ ಕರ್ತವ್ಯ ಲೋಪ ಇದೆ ಎಂದು ದೂರಿದರು.
ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಯತ್ನ ನಡೆಯಿತು. ಈ ವೇಳೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದರು. ಪೊಲೀಸ್ ಆಯುಕ್ತರ ಜತೆಗೆ ಮಾತನಾಡುವಂತೆ ಮೇಯರ್ ಹಾಗೂ ಉಪ ಮೇಯರ್ ಸಮೇತ ಕೆಲವರನ್ನು ಠಾಣೆಗೆ ಆಹ್ವಾನಿಸಲಾಯಿತು. ಒಳ ಬಂದ ನಂತರವೂ ಠಾಣೆ ಮೆಟ್ಟಿಲು ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಆಗ ಆಯುಕ್ತ ಎನ್. ಶಶಿಕುಮಾರ, ಇಲ್ಲದ್ದನ್ನು ಆರೋಪ ಮಾಡಬೇಡಿ. ಏನೇ ಇದ್ದರೂ ಮಾತನಾಡೋಣ ಎಂದು ವಿನಂತಿಸಿದರು. ಒಳಗಡೆ ಸಂಧಾನ ಸಭೆ ನಡೆಯಿತಾದರೂ ಯಶ ಕಾಣಲಿಲ್ಲ.
ಪ್ರತಿಭಟನೆ ನಿರತ ಮೇಯರ್, ಉಪಮೇಯರ್ ಸೇರಿದಂತೆ 40ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಶಿವು ಮೆಣಸಿನಕಾಯಿ, ಚಂದ್ರಿಕಾ ಮೇಸ್ತ್ರಿ, ಉಮಾ ಮುಕುಂದ, ಪ್ರಮುಖರಾದ ರಾಜು ಕಾಳೆ, ರಾಜು ಜರತಾರಘರ, ರಾಜೇಶ್ವರಿ ಸಾಲಗಟ್ಟಿ, ವಿಜಯಾ ಗುಡಗೇರಿ ಇತರರು ಪ್ರತಿಭಟನೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net