ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ
ಕರ್ನಾಟಕ ನವನಿರ್ಮಾಣ ಸೇನೆಯಿಂದ ಆಕಾಶವಾಣಿ ಕೇಂದ್ರದ ಎದುರು ಪ್ರತಿಭಟನೆ
Published on:
Copied
Follow Us
ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರ ಕೈ ಬಿಡಲು ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆಯಿಂದ ಆಕಾಶವಾಣಿ ಕೇಂದ್ರದ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಧಾರವಾಡ ಆಕಾಶವಾಣಿ ಕೇಂದ್ರವು ದಶಕಗಳಿಂದ ಉತ್ತರ ಕರ್ನಾಟಕದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಹಿಂದುಸ್ತಾನಿ ಸಂಗೀತ, ಸಾಹಿತ್ಯ ಮತ್ತು ಜನಪದ ಕಲೆಯನ್ನು ಪೋಷಿಸಿದ ಶ್ರೇಷ್ಠ ಪರಂಪರೆಯುಳ್ಳ ಕೇಂದ್ರವಾಗಿದೆ. ಇಲ್ಲಿನ ಸುದ್ದಿ ವಿಭಾಗವನ್ನು ಸ್ಥಳಾಂತರಿಸುವುದು ಈ ಭಾಗದ ಸಾಂಸತಿಕ ಅಸ್ಮಿತೆಗೆ ಧಕ್ಕೆ ತರಲಿದೆ. ಆದ್ದರಿಂದ ಸ್ಥಳಾಂತರ ಪ್ರಕ್ರಿಯೆಯನ್ನು ಕೂಡಲೇ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.