ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಸ್ಯುಸಿಐ ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ವೃದ್ಧರು, ವಿಧವೆಯರು, ಅಂಗವಿಕಲರು, ವಿಧವೆಯರು ಹಾಗೂ ಆದಾಯದ ಮೂಲಗಳಿಲ್ಲದ ರ್ದುಬಲ ವರ್ಗದ ಜನರು ಸಾಮಾಜಿಕ ಭದ್ರತಾ ಪಿಂಚಣಿಯನ್ನು ಅವಲಂಬಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವವರನ್ನು ಗುರುತಿಸಿ ನೀಡುತ್ತಿರುವ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ನಿಲ್ಲಿಸಿರುವುದು ಬಡ ಜನವಿರೋಧಿ ಕ್ರಮವಾಗಿದೆ. ಇತ್ತೀಚೆಗೆ ಶಾಸಕರು, ಸಂಸದರು ಚರ್ಚೆ ಇಲ್ಲದೆ ಪಿಂಚಣಿ ಹೆಚ್ಚಿಸಿಕೊಂಡಿದ್ದಾರೆ. ಆದರೆ, ಬಡವರ ಪಿಂಚಣಿಗಳನ್ನು ದಾಖಲೆಗಳ ನೆಪವೊಡ್ಡಿ ರದ್ದುಗೊಳಿಸುತ್ತಿರುವುದು ಅಮಾನವೀಯ ಕ್ರಮ. ದಾಖಲೆಗಳನ್ನು ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳು ಮನೆಗೆ ತೆರಳಬೇಕೆ ಹೊರತು ಜನರನ್ನು ಅಲೆದಾಡಿಸಬಾರದು ಎಂದು ಒತ್ತಾಯಿಸಿದರು.