ಮರ್ಯಾಧಾ ಹತ್ಯೆ ಖಂಡಿಸಿ ಪ್ರತಿಭಟನೆ

ಮರ್ಯಾಧಾ ಹತ್ಯೆ ಖಂಡಿಸಿ ಪ್ರತಿಭಟನೆ
ಮರ್ಯಾಧಾ ಹತ್ಯೆ ಖಂಡಿಸಿ ಪ್ರತಿಭಟನೆ
Published on
ಧಾರವಾಡ: ಹುಬ್ಬಳ್ಳಿ ತಾಲೂಕು ಇನಾಂವೀರಾಪೂರ ಗ್ರಾಮದಲ್ಲಿ ನಡೆದ ಮರ್ಯಾಧಾ ಹತ್ಯೆ ಘಟನೆ ಖಂಡಿಸಿ ಜಯ ಕರ್ನಾಟಕ ಸಂಘಟನೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಘಟನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿಯನ್ನು ಆಕೆಯ ಹೆತ್ತವರೇ ಧಾರುಣವಾಗಿ ಹತ್ಯೆ ಮಾಡಿದ ಘಟನೆ ಮಾನವ ಕುಲವೇ ತಲೆ ತಗ್ಗಿಸುವಂತದ್ದು. ಏನೂ ಅರಿಯದ ಗರ್ಭಿಣಿಯನ್ನು ಹತ್ಯೆ ಮಾಡಿದ್ದಲ್ಲದೇ ಯುವಕನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಿರುವ 18-20 ಜನ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಸಂತ್ರಸ್ತ ಕುಟುಂಬದವರಿಗೆ 10 ಎಕರೆ ಕೃಷಿ ಜಮೀನು, ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಒತ್ತಾಯಿಸಲಾಯಿತು.
ಲಕ್ಷಣ ದೊಡ್ಡಮನಿ, ಸುಧಿರ ಮುಧೋಳ, ನಾರಾಯಣ ಮಾದರ, ಎಚ್. ರಾಮಣ್ಣ, ಮಂಜುನಾಥ ಸುತಗಟ್ಟಿ, ರವಿ ಸಿದ್ದಾಟಗಿಮಠ, ವಿರೂಪಾಕ್ಷಯ್ಯ ಹುಬ್ಲಿಮಠ, ಚಂದ್ರು ಅಂಗಡಿ, ಹನುಮಂತ ಮೊರಬ, ಶಬ್ಬೀರ ಅತ್ತಾರ, ದುರಗಪ್ಪ ಕಡೇಮನಿ, ರಾಜು ಜುನ್ನಾಯಿಕರ, ಮಂಜುನಾಥ ಹೊಸಮನಿ, ಗಿರಿರಾಜ ಮೇಲಿನಮನಿ, ಗಂಗಪ್ಪ ದೊಡಮನಿ, ಜಾಕೀರಖಾನ, ಮಾರುತಿ ಮಾದರ, ಸಂಜಯ ಮಠಪತಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net