cow ದೇಸಿ ಗೋವು ಸಾಕಣೆಯಿಂದ ಕುಟುಂಬದಲ್ಲಿ ಸಮೃದ್ಧಿ

cow ಹುಬ್ಬಳ್ಳಿಯ ಕೇಶವಕುಂಜದಲ್ಲಿ ಆಯೋಜಿಸಿದ್ದ ಗೋ ಆಧಾರಿತ ಸದ್ವಿಚಾರಗೋಷ್ಠಿಯಲ್ಲಿ ಗೋಸೇವಾ ಗತಿವಿಧಿಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖ ಕೆ.ಇ.ಎನ್. ರಾಘವನ್ ಮಾತನಾಡಿದರು.
cow ಹುಬ್ಬಳ್ಳಿಯ ಕೇಶವಕುಂಜದಲ್ಲಿ ಆಯೋಜಿಸಿದ್ದ ಗೋ ಆಧಾರಿತ ಸದ್ವಿಚಾರಗೋಷ್ಠಿಯಲ್ಲಿ ಗೋಸೇವಾ ಗತಿವಿಧಿಯ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖ ಕೆ.ಇ.ಎನ್. ರಾಘವನ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕಾದರೆ ಗೋವಿನ ಹಾಲು ಕುಡಿಯ ಬೇಕು
  • ಗೋವಿನ ಹಾಲಿನಲ್ಲಿ ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳನ್ನು ತಡೆಯುವ ಗುಣ ಇದೆ
  • ಗೋವಿಗೆ ಹಿಂದು ಸಂಪ್ರದಾಯದಲ್ಲಿ ಪೂಜ್ಯನೀಯ ಸ್ಥಾನವಿದೆ.
ಹುಬ್ಬಳ್ಳಿ :
ಗೋ ಸೇವಾ ಗತಿವಿಧಿಯಿಂದ ಇಲ್ಲಿನ ಗೋಕುಲ ರಸ್ತೆಯ ಕೇಶವಕುಂಜದಲ್ಲಿ ಬುಧವಾರ ಆಯೋಜಿಸಿದ್ದ ಗೋ ಆಧಾರಿತ ಸದ್ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗೋಹತ್ಯೆ ಎಂದಿಗೂ ಮಾಡಬಾರದು. ಗೋವಿಗೆ ಹಿಂದು ಸಂಪ್ರದಾಯದಲ್ಲಿ ಪೂಜ್ಯನೀಯ ಸ್ಥಾನವಿದೆ. ದೇಸಿ ಗೋವಿನ ಹಾಲಿನಲ್ಲಿ ಚಿನ್ನದ ಅಂಶ ಇರುವುದು ಸಂಶೋಧನೆಯಿಂದ ಸಾಬೀತಾಗಿದೆ ಎಂದು ತಿಳಿಸಿದರು.
ಎಲ್ಲ ಪ್ರಾಣಿ, ಪಕ್ಷಿ ಹಾಗೂ ಮೀನುಗಳಲ್ಲಿಯೂ ಹಾಲು ಇದೆ. ಆದರೆ, ಆ ಹಾಲು ತನ್ನ ಮರಿಗಳಿಗೆ ಮಾತ್ರ ಉಣಿಸುತ್ತವೆ.
ಗೋವು ಮಾತ್ರ ತನ್ನ ಹಾಲನ್ನು ಕರುವಿಗೆ ಕುಡಿಸುವ ಜತೆಗೆ ಮಾನವರಿಗೂ ನೀಡುತ್ತವೆ. ಭಾರತದ ಗೋವಿನ ಹಾಲಿನಲ್ಲಿ ಪ್ರೋಟಿನ್ ಇದೆ ಎಂದರು.
ವಿಶ್ವಾಮಿತ್ರ ಎಮ್ಮೆಯನ್ನು ಸೃಷ್ಟಿ ಮಾಡಿದರು. ತ್ರೇತಾಯುಗ ಹಾಗೂ ದ್ವಾಪರ ಯುಗದಲ್ಲಿ ಎಮ್ಮೆಯ ಬಳಕೆ ಆಗಿರಲಿಲ್ಲ.
ಇದೀಗ, ಕಲಿಯುಗದಲ್ಲಿ ಎಮ್ಮೆಯನ್ನು ಸಾಕುತ್ತಿದ್ದಾರೆ. ಎಮ್ಮೆಯ ಹಾಲು ಸ್ವಲ್ಪ ಹಳದಿ ಬಣ್ಣದಿದ್ದರೆ, ಗೋವಿನ ಹಾಲು ಬಿಳಿ ಬಣ್ಣದ್ದಾಗಿರುತ್ತದೆ. ಗೋವಿನ ಹಾಲಿನಲ್ಲಿ ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳನ್ನು ತಡೆಯುವ ಗುಣ ಇದೆ ಎಂದು ತಿಳಿಸಿದರು.
ಆಶೀರ್ವಚನ ನೀಡಿದ ಸಾನ್ನಿಧ್ಯ ವಹಿಸಿದ್ದ ಅಮ್ಮಿನಬಾವಿಯ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಗೋ ಹತ್ಯೆ ಮಾಡುವುದು ಬ್ರಹ್ಮ ಹತ್ಯೆಗೆ ಸಮಾನ. ಗೋವಿನ ಹತ್ಯೆ ಮಾಡಿದವರಿಗಷ್ಟೇ ಅಲ್ಲದೇ, ಹತ್ಯೆಗೆ ಸಹಕಾರ ನೀಡಿದವರಿಗೂ ಪಾಪ ತಗಲುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋವು ಆಸ್ತಿಕರಿಗಷ್ಟೇ ಅಲ್ಲದೇ, ನಾಸ್ತಿಕರಿಗೂ ಬೇಕು. ಹೆತ್ತ ತಾಯಿ ಕೆಲ ವರ್ಷಗಳವರೆಗೆ ಮಾತ್ರ ಹಾಲು ಕುಡಿಸುತ್ತಾಳೆ. ಆದರೆ, ಗೋವು ನಾವು ಜೀವಂತ ಇರುವವರೆಗೂ ಕುಡಿಯಲು ಹಾಲು ಕೊಡುತ್ತದೆ. ನಾಸ್ತಿಕರು ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕಾದರೆ, ಗೋವಿನ ಹಾಲು ಕುಡಿಯಲೇ ಬೇಕು ಎಂದರು.
ಮನುಷ್ಯನ ಸಮೃದ್ಧಿಗೆ ಬೇಕಾದ ಎಲ್ಲ ಅಂಶಗಳೂ ಗೋವಿನಲ್ಲಿ ಅಡಗಿವೆ. ಗೋಮಾತೆಯ ಸೇವೆ ಮಾಡಿದವರು ಜೀವನದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ದೇಸಿ ತಳಿಗಳ ಗೋವುಗಳ ಸಾಕಾಣಿಕೆ ಹೆಚ್ಚಾಗಬೇಕು.
ದೇಸಿ ಗೋವು ಸಾಕಾಣಿಕೆ ವ್ಯವಹಾರಿಕ ದೃಷ್ಟಿಯಿಂದ ಮಾತ್ರ ಅಲ್ಲ, ಆರೋಗ್ಯಕರ ಜೀವನಕ್ಕೂ ಅಗತ್ಯ ಎಂದು ಸಲಹೆ ನೀಡಿದರು.
ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ದೇಸಿ ಗೋವಿನ ಹಾಲು ಮನುಷ್ಯನ ಆರೋಗ್ಯಕ್ಕೆ ಅತ್ಯುತ್ತಮವಾದದ್ದು. ಯುವಕರಲ್ಲಿ ಗೋವಿನ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಂಘ ಚಾಲಕರಾದ ಗೋವಿಂದಪ್ಪ ಗೌಡಪ್ಪಗೋಳ ಹಾಗೂ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net