ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಸಿಗುತ್ತಿಲ್ಲ

ಡಾ.‌ನಾಗಲಕ್ಷ್ಮೀ ಚೌಧರಿ
ಡಾ.‌ನಾಗಲಕ್ಷ್ಮೀ ಚೌಧರಿ
Published on
ಧಾರವಾಡ: ರಾಜ್ಯ ಮಹಿಳಾ ಆಯೋಗಕ್ಕೆ ಸಾರ್ವಜನಿಕರಿಂದ ಬರುವ ದೂರುಗಳಲ್ಲಿ ಅರ್ಧದಷ್ಟು ಮಾತ್ರ ಪರಿಹಾರ ಸಿಗುತ್ತಿದೆ. ಬಾಕಿ ಪ್ರಕರಣಗಳಿಗೆ ಪರಿಹಾರ ಸಿಗುತ್ತಿಲ್ಲ. ಪರಿಹರಿಸುವುದಕ್ಕೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ಸೂಚನೆ ನೀಡುತ್ತಿದ್ದೇನೆ ಎಂದು ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಗದ ಅಧ್ಯಕ್ಷೆಯಾದ ಬಳಿಕ ಕಂಡು ಕೇಳರಿಯದ ಮಹಿಳಾ ಸಮಸ್ಯೆಗಳನ್ನು ಹತ್ತಿರದಿಂದ ನೊಡಿದ್ದೇನೆ. ಎಲ್ಲೇ ಹೋದರೂ ನೂರಾರು ಸಂಖ್ಯೆಯಲ್ಲಿ ಜನರು ಬಂದು ತಮ್ಮ ಸಮಸ್ಯೆಗಳನ್ನು ಹೇಳುತ್ತಾರೆ. ಅವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸುತ್ತೇನೆ. ಅವುಗಳಲ್ಲಿ ಶೇ. 50ರಷ್ಟಕ್ಕೆ ಮಾತ್ರ ಪರಿಹಾರವಾಗುತ್ತಿವೆ. ಮನೆ ನಿರ್ಮಿಸಿ ಕೊಡುವ ಬೇಡಿಕೆಗಳು ವಿಳಂಬವಾದರೂ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ತ್ವರಿತವಾಗಿ ಸಿಗುತ್ತಿಲ್ಲ ಎಂದರು.
ಇತ್ತೀಚಿಗೆ ಕಿರಾಣಿ ಅಂಗಡಿಗಳಲ್ಲಿಯೇ ಮದ್ಯ ಸಿಗುತ್ತಿರುವುದು ವಿಷಾಧನೀಯ. ಅಬಕಾರಿ ಇಲಾಖೆ ಕೂಡ ಈ ಬಗ್ಗೆ ಕಠಿಣ ಕ್ರಮ ವಹಿಸಬೇಕು. ಇಲ್ಲವಾದರೆ ನಾವೇ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವ ಯೋಚನೆ ಇದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net