Prize mujagam ಡಾ. ಮೂಜಗಂ ಹುಬ್ಬಳ್ಳಿಯ ಶಾಂತಿದೂತರು

Prize mujagam ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿಗೆ ಡಾ. ಮೂಜಗಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ವೀರಣ್ಣ ಮತ್ತಿಕಟ್ಟಿ, ಮೋಹನ ಲಿಂಬಿಕಾಯಿ, ಅರವಿಂದ ಕುಬಸದ, ಸುನಿತಾ ಬುರಬುರೆ ಇತರರು ಇದ್ದರು.
Prize mujagam ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿಗೆ ಡಾ. ಮೂಜಗಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ವೀರಣ್ಣ ಮತ್ತಿಕಟ್ಟಿ, ಮೋಹನ ಲಿಂಬಿಕಾಯಿ, ಅರವಿಂದ ಕುಬಸದ, ಸುನಿತಾ ಬುರಬುರೆ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿನವ ಸಿದ್ಧಾರೂಡ ಸ್ವಾಮೀಜಿಗೆ ಡಾ. ಮೂಜಗಂ ಪ್ರಶಸ್ತಿ
  • ಸಾಧನೆಗಳ ಮೂಲಕ ಬದುಕಿರುವ ಗಂಗಾಧರ ಸ್ವಾಮೀಜಿ
ಹುಬ್ಬಳ್ಳಿ: Prize mujagam ಸಮಾಜದಲ್ಲಿ ಕೆಲವರು ಬದುಕಿಯೂ ಸತ್ತಂತೆ ಇರುತ್ತಾರೆ. ಆದರೆ, ಕೆಲವರು ನಮ್ಮ ಮಧ್ಯೆಯೇ ಇದ್ದಾರೆ ಎನ್ನುವಂತೆ ಬದುಕಿ ಹೋಗಿದ್ದಾರೆ. ಡಾ. ಮೂಜಗಂ ಅವರು ಈಗಲೂ ನಮ್ಮ ನಡುವೆ ತಮ್ಮ ಸಾಧನೆಗಳ ಮೂಲಕ ಬದುಕಿದ್ದಾರೆ ಎಂದು ಹುಬ್ಬಳ್ಳಿ ಶಾಂತಾಶ್ರಮದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿಯ ಮೂರುಸಾವಿರ ಮಠದ ಸಭಾಭವನದಲ್ಲಿ ಮಂಗಳವಾರ ಲಿಂ. ಜಗದ್ಗುರು ಶ್ರೀ ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ 23ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಕೊಡಮಾಡಲ್ಪಟ್ಟ ಡಾ. ಮೂಜಗಂ ಸಾಹಿತ್ಯ ಗೌರವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಭಾರತದ ಹಲವು ಭಾಷೆಗಳಿಗೆ ವಚನಗಳು ಅನುವಾದವಾಗಿದ್ದು, ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ, ಚರ್ಚೆಗಳು ನಡೆಯುತ್ತಿವೆ. ವಚನಗಳ ಅನುವಾದ ಯೋಜನೆ, ವಿಚಾರ ಸಂಕಿರಣ, ಕಾರ್ಯಾಗಾರಗಳು ಸಹ ನಡೆಯುತ್ತಿವೆ. ಜಗತ್ತಿನ 50ಕ್ಕೂ ಹೆಚ್ಚು ದೇಶಗಳ ವಿದ್ವಾಂಸರು ತಮ್ಮ ಭಾಷೆಗಳಲ್ಲಿ ಅನುವಾದ ಕಾರ್ಯ ಆರಂಭಿಸಿದ್ದಾರೆ ಎಂದರು.
ಮಣಕವಾಡದ ಅಭಿನವ ಶ್ರೀ ಮೃತ್ಯುಂಜಯ ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು.
ಡಾ. ಮೂಜಗಂ ಒಬ್ಬ ಸಾಹಿತಿ, ವಿಜ್ಞಾನಿ, ಕಲಾವಿದ, ಧರ್ಮ ಪ್ರಚಾರಕರೂ ಆಗಿದ್ದರು. ಹುಬ್ಬಳ್ಳಿ ಪಾಲಿಗೆ ಅವರು ಶಾಂತಿಧೂತರಾಗಿದ್ದರು ಎಂದರು.
ವಿಧಾನ ಪರಿಷತ್​ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿದರು. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ, ರಾಯನಾಳದ ಅಭಿನವ ಶ್ರೀ ರೇವಣಸಿದ್ಧೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪಾಲಿಕೆ ಸದಸ್ಯೆ ಸುನಿತಾ ಬುರಬುರೆ, ಕವಿವಿ ಕುಲಸಚಿವ ಎನ್​.ವೈ. ಮಟ್ಟಿಹಾಳ, ಅರವಿಂದ ಕುಬಸದ, ಅಮರೇಶ ಹಿಪ್ಪರಗಿ, ಶಶಿ ಸಾಲಿ, ಸದಾನಂದ ಡಂಗನವರ, ಸಿ.ಜಿ. ಧಾರವಾಡಶೆಟ್ಟರ, ಮಹೇಂದ್ರ ಸಿಂಘಿ, ಇತರರು ಇದ್ದರು.
ಮೂಜಗಂ ಕಲಾ ಕಾಲೇಜಿನ ಸಂಗೀತ ವಿಭಾಗದ ಡಾ. ಜ್ಯೋತಿಲಕ್ಷ್ಮಿ ಹಾಗೂ ತಂಡದವರು ಪ್ರಾರ್ಥನೆ ಹಾಡಿದರು. ಉಪನ್ಯಾಸಕ ಎಸ್​.ಅರ್​. ಕೆಂಚಣ್ಣನವರ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net