prize ರಂಗಜೀವಿ ಪ್ರಶಸ್ತಿಗೆ ಇಬ್ಬರ ಆಯ್ಕೆ

prize ಬಸವರಾಜ ಬೆಂಗೇರಿ, ಆರತಿ ದೇವಶಿಖಾಮಣಿ.
prize ಬಸವರಾಜ ಬೆಂಗೇರಿ, ಆರತಿ ದೇವಶಿಖಾಮಣಿ.
Published on

ಪ್ರಮುಖ ಮುಖ್ಯಾಂಶಗಳು

  • 30ರಂದು ಹುಬ್ಬಳ್ಳಿಯಲ್ಲಿ ಪ್ರದಾನ
  • ರಂಗ ಸಾಧನೆ ಗಮನದಲ್ಲಿ ಇಟ್ಟುಕೊಂಡು ಆಯ್ಕೆ
ಹುಬ್ಬಳ್ಳಿ: prize ಇಲ್ಲಿಯ ವಿದ್ಯಾನಗರದ ಜೀವಿ ಕಲಾ ಬಳಗದಿಂದ ರಂಗ ಪ್ರೋತ್ಸಾಹಕ ದಿ. ಕಾಡಯ್ಯನವರು ಹಿರೇಮಠ ಇವರ ಸಂಸ್ಮರಣೆಯಲ್ಲಿ ಕೊಡಲ್ಪಡುವ "ರಂಗ ಜೀವಿ' ಪ್ರಶಸ್ತಿಗೆ 2025ನೇ ಸಾಲಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ.
ಪುರುಷರ ವಿಭಾಗದಲ್ಲಿ ಕುಂದಗೋಳ ತಾಲೂಕು ಶಿರೂರಿನ ವೃತ್ತಿರಂಗಭೂಮಿ ಕಲಾವಿದ ಬಸವರಾಜ ಬೆಂಗೇರಿ ಹಾಗೂ ಮಹಿಳಾ ಕ್ಷೇತ್ರದಿಂದ ಧಾರವಾಡದ ಹವ್ಯಾಸಿ ರಂಗಭೂಮಿ ಕಲಾವಿದೆ ಆರತಿ ದೇವಶಿಖಾಮಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.
ಡಿ. 30ರಂದು ಇಲ್ಲಿಯ ಲಿಂಗರಾಜನಗರದ ಸಮುದಾಯ ಭವನದಲ್ಲಿ ಏರ್ಪಡಿಸಿರುವ ಜೀವಿಕಲಾ ಬಳಗದ ದಶಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಗೌರವಧನ ಸ್ಮರಣಿಕೆ, ಪ್ರಶಂಸಾ ಪತ್ರದೊಂದಿಗೆ ನೀಡಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net