ಸರ ಕಳ್ಳತನದ ಅಪರಾಧಿಗೆ ಜೈಲು ಶಿಕ್ಷೆ

ವಿಶ್ವನಾಥ ಕೋಳಿವಾಡ
ವಿಶ್ವನಾಥ ಕೋಳಿವಾಡ
Published on
ಧಾರವಾಡ: ರಾತ್ರಿ ಹೊತ್ತಿನಲ್ಲಿ ಬೈಕ್‌ನಲ್ಲಿ ಬಂದು ಮಹಿಳೆಯರ ಕತ್ತಿನಲ್ಲಿದ ಚಿನ್ನದ ಸರ ಕಿತ್ತುಕೊಂಡು ಪರಾರಿ ಆಗಿದ್ದ ಆರೋಪಿಗೆ 9 ಪ್ರಕರಣಗಳಲ್ಲಿ ತಲಾ 2 ವರ್ಷ ಜೈಲು ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ಧಾರವಾಡ 3ನೇ ಎಸಿಜೆಎಂ ನ್ಯಾಯಾಲಯ ಆದೇಶ ನೀಡಿದೆ.
ವಿಶ್ವನಾಥ ಸೋಮಪ್ಪ ಕೋಳಿವಾಡ ಎಂಬಾತನೇ ಶಿಕ್ಷೆಗೆ ಒಳಗಾದ ಆರೋಪಿ. ಗಾಂಧಿನಗರ, ವಿದ್ಯಾಗಿರಿ, ಲಕ್ಷಿö್ಮಸಿಂಗನಕೇರೆ, ಮಾಳಮಡ್ಡಿ, ಯಾಲಕ್ಕಿಶೆಟ್ಟರ್ ಕಾಲೊನಿ, ಹುಕ್ಕೇರಿಕರನಗರ ಪ್ರದೇಶದಲ್ಲಿನ ದೇವಸ್ಥಾನ ಹಾಗೂ ಮನೆ ಮುಂದಿನ ರಸ್ತೆಯಲ್ಲಿ ಹೊರಟಿದ್ದ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಆರೋಪಿಯು ಬೈಕ್‌ನಲ್ಲಿ ಹೆಲ್ಮೇಟ್ ಹಾಕಿಕೊಂಡು ಬಂದು ಕಿತ್ತುಕೊಂಡು ಪರಾರಿಯಾಗಿದ್ದ.
ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ 9 ಪ್ರಕರಣಗಳು ದಾಖಲಾಗಿದ್ದವು. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರ ನಡೆಸಿದ ನ್ಯಾಯಾಧೀಶರಾದ ಅಲ್ಲಪ್ಪ ಎಂ. ಬಡಿಗೇರ ಅವರು ಆರೋಪಿಗೆ ಶಿಕ್ಷೆ ಪ್ರಕಟಿಸಿದ್ದಾರೆ.
ಸರಕಾರದ ಪರವಾಗಿ ಅನಿಲಕುಮಾರ ತೊರವಿ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net