Press visit ಮುದ್ರಣ ಘಟಕ ವೀಕ್ಷಿಸಿದ ಲಾಸ್ಯ ಸುಹಾಸ್ಯ ಪರಿವಾರ

Press visit ಹುಬ್ಬಳ್ಳಿಯ ವರೂರು ವಿಜಯವಾಣಿ ಮುದ್ರಣ ಘಟಕ ವೀಕ್ಷಣೆ ಮಾಡಿದ ಲಾಸ್ಯ ಸುಹಾಸ್ಯ ಪರಿವಾರದ ಸದಸ್ಯರು.
Press visit ಹುಬ್ಬಳ್ಳಿಯ ವರೂರು ವಿಜಯವಾಣಿ ಮುದ್ರಣ ಘಟಕ ವೀಕ್ಷಣೆ ಮಾಡಿದ ಲಾಸ್ಯ ಸುಹಾಸ್ಯ ಪರಿವಾರದ ಸದಸ್ಯರು.
Published on
ಹುಬ್ಬಳ್ಳಿ: press visit ನಿವೃತ್ತರು, ಹಿರಿಯ ನಾಗರಿಕರು, ಆಸಕ್ತರು ಒಂದೆಡೆ ಸೇರಿ ನಿತ್ಯ ಹಾಸ್ಯ ಚಟಾಕಿ ಹಾರಿಸುವುದು, ನಗೆಕೂಟಗಳನ್ನು ಮಾಡುವ ಮೂಲಕ ಆಹ್ಲಾದಕರ ಜೀವನ ನಡೆಸುತ್ತಿರುವ ಲಾಸ್ಯ ಸುಹಾಸ್ಯ ಪರಿವಾರದ ಸದಸ್ಯರು ಹೊಸದೊಂದು ಲೋಕದ ಪರಿಚಯ ಮಾಡಿಕೊಂಡರು.
ಇಲ್ಲಿಯ ನವನಗರದ ಲಾಸ್ಯ ಸುಹಾಸ್ಯ ಪರಿವಾರದ ಸದಸ್ಯರು ತಾಲೂಕಿನ ವರೂರಿನಲ್ಲಿರುವ ವಿಜಯವಾಣಿ ಮುದ್ರಣ ಘಟಕಕ್ಕೆ ಭೇಟಿ ನೀಡಿ ಅತ್ಯಂತ ಖುಷಿಯಿಂದ ಹೊಸ ಮಾಹಿತಿಯನ್ನು ಕಲೆ ಹಾಕಿದರು.
ವಿಜಯವಾಣಿ ಪ್ರಿಂಟಿಂಗ್​ ಪ್ರೆಸ್​ನಲ್ಲಿ ಪತ್ರಿಕೆ ಮುದ್ರಣವಾಗುವ ವಿಧಾನ, ವಿವಿಧ ವಿಭಾಗಗಳನ್ನು ವೀಕ್ಷಣೆ ಮಾಡಿದರು.
ಪತ್ರಿಕೆಯೊಂದು ಮುದ್ರಣಗೊಂಡು ಜನರ ಕೈಗೆ ತಲುಪುವಲ್ಲಿ ಎಷ್ಟೊಂದು ಪರಿಶ್ರಮ ಇದೆ ಎಂಬುದನ್ನು ಕಣ್ಣಾರೆ ಕಂಡು ಸಿಬ್ಬಂದಿಯಿಂದ ಹೆಚ್ಚಿನ ಮಾಹಿತಿ ತಿಳಿದರು.
ಪರಿಹಾರದ ಮಹಿಳಾ ಸದಸ್ಯರು, ಪುರುಷರು ನಿತ್ಯದ ಜಂಜಾಟಗಳಿಂದ ಹೊರಬಂದು ಮುದ್ರಣ ಘಟಕದ ತುಂಬೆಲ್ಲ ಸಂಚರಿಸಿದರು.
ಇಷ್ಟೊಂದು ವ್ಯವಸ್ಥಿತವಾಗಿ ವಿಜಯವಾಣಿ ಮುದ್ರಣವಾಗುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸತನಕ್ಕೆ ಸದಾ ತೆರೆದುಕೊಳ್ಳುವ ವಿಜಯವಾಣಿಯು ಮುದ್ರಣದಲ್ಲಿಯೂ ಅನೇಕ ನವೀನ ತಂತ್ರಜ್ಞಾನ ಬಳಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ನಮ್ಮ ನೆಚ್ಚಿನ ಪತ್ರಿಕೆ ವಿಜಯವಾಣಿ ಹೇಗೆ ಪ್ರಿಂಟಿಂಗ್​ ಆಗುತ್ತದೆ ಎಂಬುದನ್ನು ನೋಡಿ ಬಹಳ ಖುಷಿ ಆಯಿತು. ವಿಆರ್​ಎಲ್​ ಸಂಸ್ಥೆಯವರು ಪತ್ರಿಕಾ ರಂಗಕ್ಕೆ ಬಂದ ಮೇಲೆ ಅದರ ಸ್ವರೂಪವನ್ನೇ ಬದಲಿಸಿದ್ದಾರೆ. ಎಲ್ಲರಿಗೂ ಕೈಗೆಟುವ ದರದಲ್ಲಿ ಪತ್ರಿಕೆ ಕೊಡುತ್ತಿದ್ದಾರೆ. ಭಾರತೀಯ ಸಂಪ್ರದಾಯದಲ್ಲಿ ಪ್ರತಿ ಹಬ್ಬಕ್ಕೂ ಒಂದೊಂದು ವಿಶೇಷತೆ ನೀಡುತ್ತ ಮಹಿಳೆಯರು, ಮಕ್ಕಳು, ಯುವಕರು ಎಲ್ಲರಿಗೂ ಉಪಯುಕ್ತ ಮಾಹಿತಿ ಕೊಡುತ್ತಿದ್ದಾರೆ. ಮಹಿಳೆಯರು ಇಡೀ ವರ್ಷ ಹುರುಪಿನಿಂದ ವಿಜಯವಾಣಿ ನೋಡುವಂತೆ ಮಾಡಿದ್ದಾರೆ. ಇದೀಗ ಅದನ್ನು ಪ್ರಿಂಟ್​ ಮಾಡುವ ವಿಧಾನ ನೋಡಲು ಅವಕಾಶ ನೀಡಿರುವುದಕ್ಕೆ ತುಂಬಾ ಖುಷಿ ಆಗಿದೆ. ಇಂತಹ ಸದವಕಾಶ ಒದಗಿಸಿದ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರಿಗೆ ತುಂಬಾ ಆಭಾರಿಯಾಗಿದ್ದೇವೆ ಎಂದು ಪರಿವಾರದ ಸದಸ್ಯರಾದ ಚಂದ್ರಿಕಾ ಬೇವೂರ, ವೀರಣ್ಣ ಅಂಗಡಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net