press visit ಮುದ್ರಣ ಘಟಕದಲ್ಲಿ ಆರ್​ವಿಎಸ್​ ಮಕ್ಕಳ ಕಲರವ

press visit ಹುಬ್ಬಳ್ಳಿ ವರೂರಿನ ವಿಜಯವಾಣಿ ಮುದ್ರಣ ಘಟಕಕ್ಕೆ ನವಲಗುಂದ ತಾಲೂಕು ಖನ್ನೂರಿನ ಆರ್​ವಿಎಸ್​ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ಮಕ್ಕಳು ಹಾಗೂ ಶಿಕ್ಷಕರು ಭೇಟಿ ನೀಡಿದರು.
press visit ಹುಬ್ಬಳ್ಳಿ ವರೂರಿನ ವಿಜಯವಾಣಿ ಮುದ್ರಣ ಘಟಕಕ್ಕೆ ನವಲಗುಂದ ತಾಲೂಕು ಖನ್ನೂರಿನ ಆರ್​ವಿಎಸ್​ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ಮಕ್ಕಳು ಹಾಗೂ ಶಿಕ್ಷಕರು ಭೇಟಿ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ವರೂರ ವಿಜಯವಾಣಿ ಪ್ರಿಂಟಿಂಗ್​ ಪ್ರೆಸ್​ಗೆ ಹೈಸ್ಕೂಲ್​ ವಿದ್ಯಾರ್ಥಿಗಳ ಭೇಟಿ
  • ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನದ ಹಸಿವು ತಣಿಸುತ್ತಿರುವ ವಿಜಯವಾಣಿ

ಹುಬ್ಬಳ್ಳಿ: press visit ನವಲಗುಂದ ತಾಲೂಕು ಖನ್ನೂರಿನ ಆರ್​ವಿಎಸ್​ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ಮಕ್ಕಳಿಗೆ ವಿಶೇಷ ದಿನ. ಕನ್ನಡದ ನಂಬರ್​ 1 ಪತ್ರಿಕೆ ವಿಜಯವಾಣಿಯ ವರೂರಿನ ಮುದ್ರಣ ಘಟಕದಲ್ಲಿ ಉತ್ಸಾಹದಿಂದ ಓಡಾಡಿ ಅನೇಕ ಸಂಗತಿಗಳನ್ನು ತಿಳಿಯುವ ಮೂಲಕ ಹೊಸಲೋಕದ ಪರಿಚಯ ಮಾಡಿಕೊಂಡರು.

ಅಧ್ಯಯನ ಪ್ರವಾಸದ ಭಾಗವಾಗಿ ವಿಜಯವಾಣಿ ಪ್ರಿಂಟಿಂಗ್​ ಪ್ರೆಸ್​ಗೆ ಆಗಮಿಸಿದಾಗ ಎಲ್ಲೆಡೆ ಮಕ್ಕಳ ಕಲರವ ಕಂಡು ಬಂತು.
ಮುದ್ರಣದ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಮಕ್ಕಳು ಎಲ್ಲವನ್ನೂ ಕುತೂಹಲದಿಂದ ಕೇಳಿ ತಿಳಿದುಕೊಂಡರು. ಮುದ್ರಣ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಮಕ್ಕಳಿಗೆ ಎಲ್ಲ ಮಾಹಿತಿ ಒದಗಿಸಿದರು.

ಶಾಲೆಯಲ್ಲಿ ನಿತ್ಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿ ಜ್ಞಾನ ವೃದ್ಧಿಸಿಕೊಳ್ಳುವ ವಿದ್ಯಾರ್ಥಿಗಳು ಇಂದು ಕೆಲವು ತಾಂತ್ರಿಕ ವಿಷಯಗಳನ್ನು ಗಮನಿಸಿದರು.

ಮಕ್ಕಳಿಗೆ ಎಲ್ಲ ವಿಷಯಗಳಲ್ಲಿ ಕುತೂಹಲವಿರುತ್ತದೆ. ಹಾಗೆಯೇ ಪ್ರೌಢಶಾಲೆ ವಿದ್ಯಾರ್ಥಿಗಳು ತಂತ್ರಜ್ಞಾನ, ಹೊಸ ಯುಗದ ಆವಿಷ್ಕಾರಗಳ ಬಗ್ಗೆ ಇನ್ನೂ ಅಧಿಕ ಉತ್ಸುಕತೆ ತೋರಿದರು.
ವಿದ್ಯಾರ್ಥಿ ಉದ್ಯೋಗ ಮಿತ್ರದ ಮೂಲಕ ಮಕ್ಕಳ ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನದ ಹಸಿವು ತಣಿಸುತ್ತಿರುವ ವಿಜಯವಾಣಿ ಮುದ್ರಣದ ಮಜಲುಗಳನ್ನು ತಿಳಿದುಕೊಂಡರು. ಹೊಸ ಜ್ಞಾನ ಗಳಿಕೆಯ ಆಶಯದೊಂದಿಗೆ ಬಂದ ವಿದ್ಯಾರ್ಥಿಗಳಿಗೆ ವಿಜಯವಾಣಿ ಮುದ್ರಣ ಘಟಕದಲ್ಲಿ ಹಲವು ವಿಶೇಷತೆಗಳು ಕಂಡವು.

ನಿತ್ಯವೂ ಮನೆಗೆ ಬರುವ ಕನ್ನಡದ ನಂಬರ್​ ಒನ್​ ಪತ್ರಿಕೆ ವಿಜಯವಾಣಿಯು ಹೇಗೆಲ್ಲ ಪ್ರಿಂಟ್​ ಆಗುತ್ತದೆ, ಓದುಗರ ಮನೆಗೆ ಹೇಗೆ ತಲುಪುತ್ತದೆ, ಈ ಮಧ್ಯೆ ಇದಕ್ಕಾಗಿ ಸಿಬ್ಬಂದಿಯ ಪರಿಶ್ರಮ ಎಷ್ಟು ಎಂಬ ಸಂಗತಿಗಳನ್ನು ತಿಳಿದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net