ಇಲ್ಲಿನ 52ನೇ ವಾರ್ಡ್ನ ಜಗದೀಶ ನಗರದಲ್ಲಿ ಬುಧವಾರ ಸಾರ್ವಜನಿಕರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಂಪರ್ಕ ಸಭೆ ನಡೆಸಿದ ಅವರು, ಮಳೆಗಾಲಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಕೆಲವೊಂದು ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಅಂತಹ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.
ಕೆರೆ ಹಾಗೂ ಗಟಾರುಗಳ ಹೂಳು ತೆಗೆಯಬೇಕು. ಗಿಡಗಳ ಟೊಂಗೆಗಳನ್ನು ಕತ್ತರಿಸಬೇಕು. ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ ಬಾರಿ ಮಳೆಗಾಲದಲ್ಲಿ ಆಗಿರುವ ಸಮಸ್ಯೆಗಳು ಯಾವುದೇ ಸಂದರ್ಭದಲ್ಲಿ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ ಶಾಸಕ ಟೆಂಗಿನಕಾಯಿ, ಹಿಂದಿನ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೆ ಕೈಗೊಂಡಿರುವ ಕಾಮಗಾರಿ ಹಾಗೂ ಮಳೆಗಾಲದ ಹಿನ್ನೆಲೆಯಲ್ಲಿ ಮಾಡಿರುವ ವಿವಿಧ ಕೆಲಸಗಳ ಬಗ್ಗೆ ಅಧಿಕಾರಿಗಳು ವಿವರಣೆ ನೀಡಿದರು.
ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ವಲಯ ಅಧಿಕಾರಿ ಕಾಸರಗೋಡ, ಪ್ರವೀಣ ನಾಗನೂರ, ಹರೀಶ ಜಂಗಲಿ, ನಾಗೇಶ ಕಟ್ಟಿಮನಿ, ಕಿಶನ ಬಿಲಾನ, ಮಂಜು ಬ್ಯಾಡಗಿ ಹಾಗೂ ಇತರರು ಹಾಜರಿದ್ದರು.