ಚರ್ಚ್ಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಏಸು ಜನನದ ಸ್ಥಬ್ಧ ಚಿತ್ರಗಳು ಕಂಡುಬಂದವು.
ಸಿಹಿ ತಿನಿಸುಗಳು ಗ್ರಾಹಕರನ್ನು ಸೆಳೆಯುತ್ತಿವೆ.
ನಗರದ ಸನ್ಜಾನ್ ಲೂತಾರನ್ ಚರ್ಚ್, ಸೇಂಟ್ ಪೀಟರ್ ಚರ್ಚ್, ತೆಲುಗು ಬ್ಯಾಪಿಸ್ಟ್ ಚರ್ಚ್, ಮೈಯರ್ ಸ್ಮಾರಕ ದೇವಾಲಯ ಹಾಗೂ ಇನ್ನಿತರ ಚರ್ಚ್ಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಚರ್ಚ್ ಮತ್ತು ಮನೆಗಳಲ್ಲಿ ಇಟ್ಟಿದ್ದ ಸಾಂತಾ ಕ್ಲಾಸ್, ಕ್ರಿಸ್ವುಸ್ ನಕ್ಷತ್ರಗಳು ಗಮನ ಸೆಳೆದವು. ಏಸು ಜನನದ ಸ್ಥಬ್ಧ ಚಿತ್ರಗಳು ಕಂಡುಬಂದವು.
ಚರ್ಚ್ಗಳು ಹಾಗೂ ಮನೆಗಳು ಸುಣ್ಣ ಬಣ್ಣ ಕಂಡು, ವಿಶೇಷ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ನಕ್ಷತ್ರ ದೀಪಗಳು ಮನೆಗಳನ್ನು ಬೆಳಗುತ್ತಿವೆ.
ಕ್ರಿಬ್ಗಳ ತಯಾರಿ, ಅಂಗಡಿಗಳಲ್ಲಿ ಸಾಂತಾಕ್ಲಾಸ್ ಬಟ್ಟೆಗಳು, ಬೇಕರಿಗಳಲ್ಲಿ ಕುಸ್ಟಾರ್ ಸಹಿತ ಹಲವು ಬಗೆಯ ಸಿಹಿ ತಿನಿಸುಗಳು ಗ್ರಾಹಕರನ್ನು ಸೆಳೆಯುತ್ತಿವೆ.
ಕ್ರೖೆಸ್ತ ಬಾಂಧವರ ಮನೆಗಳಲ್ಲಿ ಕೇಕ್ ತಯಾರಿ, ಸ್ನೇಹಿತರಿಗೆ ಸಿಹಿ ವಿತರಣೆಗೆ ಸಿದ್ಧತೆ ನಡೆದಿದೆ. ಹಬ್ಬದ ಪ್ರಯುಕ್ತ ಮನೆಗಳಲ್ಲಿ ಕ್ರಿಸ್ವುಸ್ ಟ್ರಿಗಳನ್ನು ವಿದ್ಯುದೀಪಗಳಿಂದ ಸಿಂಗರಿಸಲಾಗುತ್ತದೆ.
ಹಲವಾರು ಬೇಕರಿಗಳಲ್ಲಿ ವಿವಿಧ ಬಗೆಯ ತಿಂಡಿಗಳು, ವಿಶೇಷವಾಗಿ ಸಿದ್ಧಪಡಿಸಿದ ಕೇಕ್ಗಳು ಮಾರಾಟಗೊಂಡವು.