premature ಅಪ್ರಾಪ್ತೆಗೆ ಜನಿಸಿದ ಮಗು ಮಾರಾಟ?

premature ಹಳೇ ಹುಬ್ಬಳ್ಳಿ ಠಾಣೆಗೆ ನೀಡಿದ ದೂರು
premature ಹಳೇ ಹುಬ್ಬಳ್ಳಿ ಠಾಣೆಗೆ ನೀಡಿದ ದೂರು
Published on
ಹುಬ್ಬಳ್ಳಿ: ಅಪ್ರಾಪ್ತೆಗೆ premature ಹೆರಿಗೆ ಮಾಡಿಸಿದ್ದಲ್ಲದೆ ಮಗುವನ್ನು ಬೇರೆಯವರಿಗೆ ಹಸ್ತಾಂತರ ಮಾಡಿದ್ದರ ಗಂಭೀರ ಆರೋಪ ವೈದ್ಯರ ವಿರುದ್ಧ ಕೇಳಿ ಬಂದಿದ್ದು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಳೇ ಹುಬ್ಬಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಹುಬ್ಬಳ್ಳಿಯ ಅಪ್ರಾಪ್ತೆಯನ್ನು ಪುಸಲಾಯಿಸಿ ಕರೀಂ ಎನ್ನುವಾತ ಗರ್ಭಿಣಿಯಾಗಿಸಿದ್ದ. ಈ ವಿಷಯ ಅಪ್ತಾಪ್ತೆಯ ತಂದೆ-ತಾಯಿಗೆ ಗೊತ್ತಿದ್ದೂ ಇಲಾಖಗೆ ತಿಳಿಸಿದೆ ಮರೆ ಮಾಚಿದ್ದಾರೆ. ಅಲ್ಲದೆ ಮಗುವನ್ನು ಬೇರೆಯವರಿಗೆ ಕೊಟ್ಟಿದ್ದಾರೆ. ಚಿಕಿತ್ಸೆ ನೀಡಿದ್ದರ ಬಗ್ಗೆ ದಾಖಲಾತಿ ಪಡೆಯದೆ ಚಿಕಿತ್ಸೆ ನೀಡಿದ್ದು, ಈ ವಿಷಯವನ್ನು ಯಾವುದೇ ಇಲಾಖೆಗೆ ಮಾಹಿತಿ ಒದಗಿಸದೆ ಅಪರಾಧ ಮರೆ ಮಾಚಿದ ಚಳ್ಳಮಟ್ಟಿ ಗ್ರಾಮದ ವೈದ್ಯರು ಮತ್ತು ಅನ್ನಪೂರ್ಣ ನರ್ಸಿಂಗ್ ಹೋಂನ ವೈದ್ಯೆ ಡಾ. ಸುಶೂಲಾ ಪಾಟೀಲ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪ್ರಕಾಶ ಕೊಡ್ಲಿವಾಡ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net