premature baby ಏಳು ಜನರ ಮೇಲೆ ಕೇಸ್

 premature baby ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ ದೂರು ನೀಡಿದ್ದಾರೆ.
premature baby ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ ದೂರು ನೀಡಿದ್ದಾರೆ.
Published on
ಹುಬ್ಬಳ್ಳಿ: ಅಪ್ರಾಪ್ತೆ ಮಗುವಿಗೆ ಜನ್ಮ premature baby ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೃತ್ಯಕ್ಕೆ ಕಾರಣವಾದ ಯುವಕ ಸೇರಿ ಏಳು ಜನರ ವಿರುದ್ಧ ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಶನಿವಾರ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಾಹಿಲ್ ಸಿ. ಹಾಗೂ ಅಪ್ರಾಪ್ತೆಯ ತಂದೆ, ತಾಯಿ, ಖಾಸಗಿ ವೈದ್ಯರಾದ ಸಂಜಯ ಸಿಂಗ್, ಅಪೂರ್ವ, ಸುಶೀಲಾ ಸೇರಿ 7 ಜನರ ವಿರುದ್ಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿ ದೂರು ನೀಡಿದ್ದಾರೆ.
ಸಾಹಿಲ್ ಎಂಬಾತ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯವನ್ನು ಅಪ್ರಾಪ್ತೆಯು ತಮ್ಮ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಆಗ ಅಪ್ರಾಪ್ತೆಯ ತಾಯಿ ಖಾಸಗಿ ವೈದ್ಯರ ಬಳಿ ಹೋದಾಗ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಆದರೆ, ವೈದ್ಯರು ಹಾಗೂ ಕುಟುಂಬಸ್ಥರು ಈ ವಿಷಯವನ್ನು ಮುಚ್ಚಿಟ್ಟಿದ್ದಾರೆ.
ಮೂರು ದಿನದ ಹಿಂದೆ ಅಪ್ರಾಪ್ತೆ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಷಯವನ್ನು ಕೆಎಂಸಿಆರ್‌ಐ ವೈದ್ಯರು, ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದಿದ್ದಾರೆ.
ಜು. 8ರಂದು ಅಪ್ರಾಪ್ತೆಯ ಹೆರಿಗೆಯಾಗಿದೆ. ಆಕೆಗೆ ನಿರ್ಭಯ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಶುವನ್ನು ಮಕ್ಕಳ ತೀವ್ರ ಚಿಕಿತ್ಸಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರೂ ಅರೋಗ್ಯವಾಗಿದ್ದಾರೆ ಎಂದು ಕೆಎಂಸಿಆರ್‌ಐ ವೈದ್ಯರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net