prediction ನಿಜವಾಯಿತು ಯುಗಾದಿ ಫಲ ಭವಿಷ್ಯ

ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದಲ್ಲಿ ಯುಗಾದಿ ಅಮಾವಾಸ್ಯೆ ದಿನ ತುಪ್ಪರಿಹಳ್ಳದ ದಂಡೆಯ ಮೇಲೆ ಯುಗಾದಿಯಂದು ಹಾಕಿದ ಭವಿಷ್ಯ (prediction) ನುಡಿಯುವ ಫಲದ ಜತೆಗೆ ಗ್ರಾಮದ ರೈತರು.
ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದಲ್ಲಿ ಯುಗಾದಿ ಅಮಾವಾಸ್ಯೆ ದಿನ ತುಪ್ಪರಿಹಳ್ಳದ ದಂಡೆಯ ಮೇಲೆ ಯುಗಾದಿಯಂದು ಹಾಕಿದ ಭವಿಷ್ಯ (prediction) ನುಡಿಯುವ ಫಲದ ಜತೆಗೆ ಗ್ರಾಮದ ರೈತರು.
Published on
ಉಪ್ಪಿನಬೆಟಗೇರಿ: ನೂರಾರು ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿರುವ ಧಾರವಾಡ ತಾಲೂಕು ಹನುಮನಕೊಪ್ಪದ ಯುಗಾದಿ ಬೊಂಬೆ ಭವಿಷ್ಯ (prediction) ನಿಜವಾಗಿದೆ.
ಪ್ರತಿವರ್ಷ ಯುಗಾದಿ ಹಬ್ಬದ ಅಮವಾಸ್ಯೆಯಂದು ಗ್ರಾಮದ ಹಿರಿಯರು, ಈ ಬೊಂಬೆ ಭವಿಷ್ಯದ ಫಲ ಹಾಕುತ್ತ ಬಂದಿದ್ದಾರೆ.
ಕಳೆದ ಯುಗಾದಿ ಅಮವಾಸ್ಯೆಯಂದು ಪೂರ್ವಕ್ಕೆ ಹರಿಯುವ ತುಪ್ಪರಿಹಳ್ಳದ ದಡದಲ್ಲಿ ಹನುಮನಕೊಪ್ಪ ಗ್ರಾಮದ ಹಿರಿಯರು ಯುಗಾದಿ ಫಲ ಹಾಕಿ ಬಂದಿದ್ದರು. ಮಣ್ಣಿನಿಂದ ಗದ್ದುಗೆ ನಿರ್ಮಾಣ ಮಾಡಿ, ನಾಲ್ಕೂ ದಿಕ್ಕಿಗೆ ರಾಜಕಾರಣಿಗಳ ಆಕೃತಿ, ಸೈನಿಕರ ಆಕೃತಿ, ರೈತರ ಆಕೃತಿ ಮಾಡಿದ್ದರು. ಜತೆಗೆ ಮಳೆ ಹಾಗೂ ಧಾನ್ಯಗಳ ಬೆಲೆ ತಿಳಿದುಕೊಳ್ಳಲು ಫಲ ಹಾಕಿಟ್ಟಿದ್ದರು.
ಅಮವಾಸ್ಯೆಯ ದಿನ ಹಾಕಿದ್ದ ಯುಗಾದಿ ಫಲವನ್ನು ಮಾರನೇ ದಿನ ಪಾಡ್ಯದಂದು ಬೆಳಗ್ಗೆ ಹೋಗಿ ನೋಡಿದಾಗ, ನಾಲ್ಕು ದಿಕ್ಕಿನಲ್ಲಿ ಮಾಡಿಡಲಾಗಿದ್ದ ಸೈನಿಕರ ಆಕೃತಿಯಲ್ಲಿ ಕರ್ನಾಟಕದ ದಿಕ್ಕಿನ ಗೊಂಬೆಗೆ ಪೆಟ್ಟಾಗಿತ್ತು. ಇದು ರಾಜ್ಯದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಗಳ ಮುನ್ಸೂಚನೆ ನೀಡಿತ್ತು. ಅಧಿಕಾರದಲ್ಲಿರುವವರ ರಾಜಕೀಯ ಭವಿಷ್ಯ ತಲೆಕೆಳಗಾಗುವ ರೀತಿಯಲ್ಲಿ ವಿಶ್ಲೇಷಣೆ ನಡೆದಿತ್ತು. ಸಿದ್ದರಾಮಯ್ಯ ಗುರುವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹನುಮನಕೊಪ್ಪ ಗ್ರಾಮದ ಯುಗಾದಿ ಗೊಂಬೆಯ ಭವಿಷ್ಯ ನಿಜವಾಗಿದೆ.
ಈ ಬೊಂಬೆಗಳು ನುಡಿದ ಭವಿಷ್ಯ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೂಡ ನಿಜ ಆಗಿವೆ. ಯುಗಾದಿ ದಿನ ಇಲ್ಲಿ ಹಾಕುವ ಭವಿಷ್ಯದ ಫಲವು ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುವ ಮುನ್ಸೂಚನೆ ನೀಡಿತ್ತು. ಈಗ ಈ ಸಾಲಿಗೆ ಸಿದ್ದರಾಮಯ್ಯ ರಾಜೀನಾಮೆ ಸೇರ್ಪಡೆಯಾಗಿದೆ.
"

ಪ್ರತಿವರ್ಷ ಯುಗಾದಿಯಂದು ನಮ್ಮ ಗ್ರಾಮದ ತುಪ್ಪರಿಹಳ್ಳದ ದಂಡೆಯ ಮೇಲೆ ಹಾಕುವ ಫಲದ ಭವಿಷ್ಯ ನಿಜವಾಗುತ್ತ ಬಂದಿದ್ದು, ಪ್ರಸಕ್ತ ವರ್ಷ ಕರ್ನಾಟಕದ ಗೊಂಬೆಗೆ ಪೆಟ್ಟಾಗಿತ್ತು. ಸಿದ್ದರಾಮಯ್ಯರ ಬದಲಾವಣೆ ಮುನ್ಸೂಚನೆಯನ್ನು ಎರಡು ತಿಂಗಳ ಹಿಂದೆಯೇ ನೀಡಿದ್ದ ನಮ್ಮ ಯುಗಾದಿ ಫಲದ ಭವಿಷ್ಯ ಈಗ ನಿಜವಾಗಿದೆ.

| ನಾಗರಾಜ ಹಾರೋಬೆಳವಡಿ, ಹನುಮನಕೊಪ್ಪ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net