ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕ್ಕೆ ಬೇಕಿರುವುದು ಸಂಘಟನೆ. ನಮ್ಮದು ಆ ಮಠ, ಈ ಮಠ ಎನ್ನುವುದನ್ನು ಬಿಡಬೇಕು. ಹವ್ಯಕ ಭಾಷೆ ಅಕಾಡೆಮಿ ಆರಂಭಿಸಲಾಗಿದೆ. ಇದರಿಂದ ನಮ್ಮ ಭಾಷೆಯ ವಿಶೇಷತೆ ವಿಸ್ತೃತಗೊಳ್ಳಲಿದೆ. ಹವ್ಯಕ ಸಮಾಜದವರಲ್ಲಿ ಸಂಸ್ಕಾರ, ಸಂಸ್ಕೃತಿ, ನಡೆ-ನುಡಿಯಲ್ಲಿ ವಿಶೇಷತೆ ಇದೆ ಎಂದರಲ್ಲದೆ, ಪ್ರತಿ ವರ್ಷ ಗಾಯತ್ರಿ ಮಹೋತ್ಸವ, ಪ್ರತಿಬಿಂಬ, ಸಂಸ್ಕಾರೋತ್ಸವ ಮಾಡಬೇಕಿದೆ ಎಂದರು.