pratibha puraskara ಒಬಿಸಿ ಪಟ್ಟಿಗೆ ಸೇರಿಸಲು ಪ್ರಯತ್ನಿಸೋಣ

ವೀರಶೈವ ಲಿಂಗಾಯತ ಎಲ್ಲ pratibha puraskara ಒಳಪಂಗಡಗಳ ಸಮಾಜದ ಪ್ರತಿಭಾನ್ವಿತ ಪಿಯುಸಿ ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೀರಶೈವ ಲಿಂಗಾಯತ ಎಲ್ಲ pratibha puraskara ಒಳಪಂಗಡಗಳ ಸಮಾಜದ ಪ್ರತಿಭಾನ್ವಿತ ಪಿಯುಸಿ ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
Published on
ಹುಬ್ಬಳ್ಳಿ: ಬಸವೇಶ್ವರರ ತತ್ವಗಳನ್ನು ಅನುಸರಿಸಿದರೆ, pratibha puraskara ನಾವು ಎಲ್ಲರೊಳಗೆ ಒಂದಾಗಿ ಜೀವಿಸಿದಂತಾಗುತ್ತದೆ. ಸಮಾಜದಲ್ಲಿ ಒಳಪಂಗಡಗಳಿವೆ. ಇವೆಲ್ಲವನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಒತ್ತಡ ಹೇರಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಶೈವ ಲಿಂಗಾಯತ ಸೇವಾ ಸಮಿತಿ ವತಿಯಿಂದ ಇಲ್ಲಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸೇರ್ಪಡೆಯಾದರೆ ಸಮಾಜಕ್ಕೆ ಸಾಕಷ್ಟು ಸೌಲಭ್ಯ ದೊರೆಯಲಿವೆ. ವೀರಶೈವ ಲಿಂಗಾಯತ ಸಮಾಜ ಬಹುದೊಡ್ಡ ಸಮಾಜ. ನಮ್ಮ ಸಮಾಜದಲ್ಲಿ ಸಾಕಷ್ಟು ಒಳಪಂಗಡಗಳಿವೆ. ಅವರೆಲ್ಲರನ್ನೂ ಒಂದಾಗಬೇಕು. ಸಮಾಜವನ್ನು ಒಡೆಯುವವರಿಂದ ನಾವು ಎಚ್ಚರದಿಂದ ಇರಬೇಕು. ಇನ್ನಷ್ಟು ನಮ್ಮ ಸಮಾಜವನ್ನು ಬಲಪಡಿಸೋಣ ಎಂದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಲಿಂಗಾಯತ ಸಮಾಜದವರು ಬಸವಣ್ಣನವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಅನ್ಯ ಸಮಾಜದವರನ್ನು ದೂಷಿಸುವುದಿಲ್ಲ. ಎಲ್ಲರೂ ನಮ್ಮವರೆಂದು ತಿಳಿದು ವೀರಶೈವ ಲಿಂಗಾಯತರು ಬದುಕುತ್ತಿದ್ದೇವೆ. ಅದೇ ರೀತಿ ಸಮಾಜದ ಮಕ್ಕಳು ಎತ್ತರದ ಸ್ಥಾನಕ್ಕೆ ಹೋಗಬೇಕು ಎಂಬ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳುತ್ತ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಮಾಜಿ ಶಾಸಕ ಎಂ.ಎಸ್. ಅಕ್ಕಿ ಮಾತನಾಡಿ, ವೀರಶೈವ ಸಮಾಜದವರಾದ ನಾವೆಲ್ಲರೂ ರಾಜಕೀಯ, ಸಾಮಾಜಿಕವಾಗಿ ಒಂದಾಗಬೇಕು. ಶಿಕ್ಷಣ, ಸಂಸ್ಕಾರ ನಮ್ಮ ಸಮಾಜದ ವಿದ್ಯಾರ್ಥಿಗಳಲ್ಲಿದೆ. ನಾವು ಇಂಥದಕ್ಕೆ ಪ್ರೋತ್ಸಾಹಿಸೋಣ ಎಂದರು.
ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ನಾಗೇಶ ಅಣ್ಣಿಗೇರಿ, ಗಿರೀಶ ಪಟ್ಟಣಶೆಟ್ಟಿ, ಸಮೃದ್ಧಿ ಮುಂಗರವಾಡಿ, ದೀಪಾ ಗೌರಿ ಅವರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಸಮಿತಿ ಕಾರ್ಯದರ್ಶಿ ಪ್ರಕಾಶ ಬೆಂಡಿಗೇರಿ, ಪ್ರಮುಖರಾದ ಶಂಕರ ಕೋಳಿವಾಡ, ಮಲ್ಲಿಕಾರ್ಜುನ ರಡ್ಡೇರ, ಎಸ್.ಎಂ. ಶಿವಯೋಗಿಮಠ, ಸದಾಶಿವ ಚೌಶೆಟ್ಟಿ, ಶಂಭು ಲಕ್ಷ್ಮೇಶ್ವರಮಠ, ಮಹಾಂತೇಶ ಗಿರಿಮಠ, ತಾರಾದೇವಿ ವಾಲಿ, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net