ಗ್ರಾಪಂ ಅಧ್ಯಕ್ಷ ಬಸೀರ್ ಅಹ್ಮದ್ ಮಾಳಗಿಮನಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ನಿಜಗುಣಿ ಹೂಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಛಾಯಾ ಹೆಗಡೆ, ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ, ಉಪಾಧ್ಯಕ್ಷ ವೀರಣ್ಣಾ ಪರಾಂಡೆ, ಮಂಜುನಾಥ ಸಂಕಣ್ಣವರ, ಮಲ್ಲಣ್ಣ ಅಷ್ಟಗಿ, ಜಿ.ಆರ್. ಜವಳಗಿ, ಶಿವಪ್ಪ ವಿಜಾಪೂರ, ಸಿಆರ್‌ಪಿ ಹೇಮಲತಾ ಢಗೆ, ಸುರೇಶಬಾಬು ತಳವಾರ, ಗಂಗಪ್ಪ ತಳವಾರ ಇತರರಿದ್ದರು. ಕಾರ್ಯಕ್ರಮದಲ್ಲಿ 16 ಶಾಲೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.