prasad abbayya ಪುಷ್ಕರಣಿಯದ್ದು ರಾಜಕೀಯ ಪ್ರೇರಿತ ಹೋರಾಟ

prasad abbayya ಹಳೇ ಹುಬ್ಬಳ್ಳಿಯ ಶ್ರೀ ಭವಾನಿ ಶಂಕರ ದೇವಸ್ಥಾನಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಭಾನುವಾರ ಭೇಟಿ ನೀಡಿದರು.
prasad abbayya ಹಳೇ ಹುಬ್ಬಳ್ಳಿಯ ಶ್ರೀ ಭವಾನಿ ಶಂಕರ ದೇವಸ್ಥಾನಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಭಾನುವಾರ ಭೇಟಿ ನೀಡಿದರು.
Published on

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಶ್ರೀ ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿಗೆ ಸಂಬಂಧಿಸಿದಂತೆ ಬಿಜೆಪಿಯವರು ನಡೆಸುತ್ತಿರುವುದು ರಾಜಕೀಯ ಪ್ರೇರಿತ ಹೋರಾಟ ಎಂದು ಶಾಸಕ ಪ್ರಸಾದ ಅಬ್ಬಯ್ಯ

prasad abbayya

ಛೇಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಡಾ ಸಿಡಿಪಿಯಲ್ಲಿ ರಸ್ತೆ ಇದೆ ಎನ್ನುವುದು ಇದೆ. ರಾಜ್ಯ ಪುರಾತತ್ವ ಇಲಾಖೆಯನ್ನು 2023ರಲ್ಲಿ ಹು-ಧಾ ಮಹಾನಗರ ಪಾಲಿಕೆ ಸಂಪರ್ಕ ಮಾಡಿತ್ತು. ಆಗ ಪುಷ್ಕರಣಿ ಇಲ್ಲ ಎಂದು ಇಲಾಖೆ ಹೇಳಿದೆ. ಇದರ ಆಧಾರದ ಮೇಲೆ ಪಾಲಿಕೆ ರಸ್ತೆ ಕಾಮಗಾರಿಗೆ ಆದೇಶ ನೀಡಿದೆ ಎಂದು ವಿವರಿಸಿದರು.
ಬಿಜೆಪಿಯವರಲ್ಲಿ ಯಾವ ದಾಖಲೆಗಳು, ಸಾಕ್ಷಿ ಇವೆಯೋ ಗೊತ್ತಿಲ್ಲ. ಆರ್‌ಎಸ್‌ಎಸ್ ನಾಗಪುರ ಕಚೇರಿಯಲ್ಲಿ ಪುರಾವೆಗಳಿವೆಯೋ ಅಥವಾ ಮಾಡಿದ್ದಾರೋ ಗೊತ್ತಿಲ್ಲ. ಜಾತಿ-ಧರ್ಮದ ಹೆಸರಿನಲ್ಲಿ ಹೋರಾಟ ಮಾಡುವುದು ಬಿಟ್ಟರೆ ಮತ್ತೇನು ಮಾಡುತ್ತಾರೆ. ಕಾನೂನು ಹೋರಾಟ ಮಾಡುವುದಿದ್ದರೆ ಮಾಡಲಿ, ಆಗಲಾದರೂ ಸತ್ಯ ಹೊರಗಡೆ ಬರುತ್ತದೆ ಎಂದರು.
ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಸಂಬಂಧ ಮಾಡಿದ ಹೋರಾಟದಿಂದ ಹುಬ್ಬಳ್ಳಿಯ ವಾಣಿಜ್ಯ, ವ್ಯವಹಾರ 10 ವರ್ಷ ಹಿಂದಕ್ಕೆ ಹೋಯಿತು. ಬೇರೆ ಜಿಲ್ಲೆಗೆ ಬಿಜಿನೆಸ್ ಸ್ಥಳಾಂತರಗೊಂಡಿತು. ಬಿಜೆಪಿಯ ಪಾಂಡುರಂಗ ಪಾಟೀಲ ಅಲ್ಲಿ ಕಾರ್ಪೋರೇಟರ್ ಇದ್ದರು. ಅವರ ಅವಧಿಯಲ್ಲಿ ದೇವಸ್ಥಾನದ ಸುತ್ತಮುತ್ತ ಕಾಮಗಾರಿ ಆಗಿವೆ. ಆಗ ಯಾಕೆ ಬಿಜೆಪಿಯವರು ಚೆಕಾರ ಎತ್ತಲಿಲ್ಲ. ಈಗ ರಸ್ತೆ ಮಾಡಿದ್ದಕ್ಕೆ ಧರ್ಮದ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದಾರೆ. ಇಲ್ಲಿ ದಲಿತರು ಸೇರಿದಂತೆ ಬಹಳಷ್ಟು ಹಿಂದೂಗಳು ವಾಸ ಮಾಡುತ್ತಿದ್ದಾರೆ. ಅವರಿಗೆ ಮೂಲ ಸೌಕರ್ಯ ಕಲ್ಪಿಸುವುದು ಬೇಡವೇ? ಎಂದು ಪ್ರಶ್ನೆ ಮಾಡಿದರು.

ಹಳೇ ಹುಬ್ಬಳ್ಳಿಯ ಶ್ರೀ ಭವಾನಿ ಶಂಕರ ದೇವಸ್ಥಾನಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಭಾನುವಾರ ಭೇಟಿ ನೀಡಿ, ಪುಷ್ಕರಣಿಗೆ ಸಂಬಂಧಿಸಿದ ವಿಷಯ ಕುರಿತು ಹಲವರೊಂದಿಗೆ ಚರ್ಚಿಸಿದರು. ದೇವಸ್ಥಾನದ ಪ್ರಾಂಗಣ, ಮುಂಭಾಗದ ರಸ್ತೆಯನ್ನು ನೋಡಿದ ಶಾಸಕರು, ನಂತರ ಪುಷ್ಕರಣಿಯ ಕುರುಹು ಕುರಿತು ಸಂಬಂಧಿಸಿದವರಿಂದ ಮಾಹಿತಿ ಪಡೆದರು. ಈ ವೇಳೆ ಪ್ರಮುಖರಾದ ರಜತ್ ಉಳ್ಳಾಗಡ್ಡಿಮಠ, ಅಲ್ತಾಫ್ ಹಳ್ಳೂರ, ಗುರುನಾಥ ಉಳ್ಳಿಕಾಶಿ, ಶ್ರೀನಿವಾಸ ಬೆಳದಡಿ, ರಜನಿಕಾಂತ ಬಿಜವಾಡ, ಪ್ರಭು ಪ್ರಭಾಕರ, ಮಾರುತಿ ದೊಡ್ಡಮನಿ, ಸಂತೋಷ ಪೂಜಾರ, ಮಂಜುನಾಥ ಉಳ್ಳಿಕಾಶಿ, ಶ್ರೀಶೈಲ ಛಲವಾದಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net