ಶಾಸಕ ಪ್ರಸಾದ ಅಬ್ಬಯ prasad abbayy ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹುಬ್ಬಳ್ಳಿಯ ಜವಳಿ ಸಾಲ್‌ನ ವರ್ತಕರು ತಹಸೀಲ್ದಾರ್ ಮಹೇಶ ಗಸ್ತೆ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಶನಿವಾರ ಮನವಿ ರವಾನಿಸಿದರು.
ಹುಬ್ಬಳ್ಳಿ:ಶಾಸಕ ಪ್ರಸಾದ ಅಬ್ಬಯ prasad abbayy ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜವಳಿ ಸಾಲ್‌ನ ವರ್ತಕರು ಶನಿವಾರ ಇಲ್ಲಿಯ ಹಿರೇಪೇಟ ವೃತ್ತದಲ್ಲಿ ಸಭೆ ನಡೆಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಹಕ್ಕೊತ್ತಾಯ ಮಂಡಿಸಿದರು.
ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ ಮಾತನಾಡಿ, ಶಾಸಕ ಪ್ರಸಾದ ಅಬ್ಬಯ್ಯ ಅವರು ಸತತ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಇಂಥವರಿಗೆ ಸಚಿವ ಸ್ಥಾನ ನೀಡುವ ಅಗತ್ಯವಿದೆ. ಬರೀ ಕ್ಷೇತ್ರವಷ್ಟೇ ಅಲ್ಲದೆ, ರಾಜ್ಯದ ಅಭಿವೃದ್ಧಿಗೂ ಅವರು ಕೈ ಜೋಡಿಸಲಿದ್ದಾರೆ ಎಂದರು.
ಪಾಲಿಕೆ ಮಾಜಿ ಉಪ ಮೇಯರ್ ಮೋಹನ ಸವಣೂರ ಮಾತನಾಡಿ, ಜಾತ್ಯತೀತ ನಾಯಕ ಪ್ರಸಾದ ಅಬ್ಬಯ್ಯ. ಸರ್ವರ ಏಳಿಗೆಯನ್ನು ಬಯಸುವಂಥ ನಾಯಕ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡುವ ಅಗತ್ಯವಿದೆ ಎಂದರು.
ಪಾಲಿಕೆ ಮಾಜಿ ಸದಸ್ಯ ಚಂದ್ರಶೇಖರ ಅಳಗುಂಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಇದ್ದಾಗಿನಿಂದಲೂ ಪ್ರಸಾದ ಅಬ್ಬಯ್ಯ ಅವರನ್ನು ನೋಡುತ್ತು ಬಂದಿದ್ದೇನೆ. ಪಕ್ಷ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಹಾಗಾಗಿಯೇ ಅವರು ಶಾಸಕರಾಗಿ ಮೂರು ಬಾರಿ ಆಯ್ಕೆಯಾಗುವಂತಾಯಿತು. ಈಗ ಸಚಿವ ಸ್ಥಾನ ಕೊಟ್ಟರೆ ಇನ್ನಷ್ಟು ಕೆಲಸ ಮಾಡುವ ಉಮೇದಿ ಅವರಲ್ಲಿ ಹೆಚ್ಚಳಿದೆ ಎಂದರು.
ವರ್ತಕ ವಿಜಯಕುಮಾರ ಅಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ದಕ್ಷಿಣ ಭಾಗದವರಿಗೆ ಸಚಿವ ಸ್ಥಾನ ಹೆಚ್ಚಿಗೆ ಕೊಡಲಾಗುತ್ತಿದೆ. ಎರಡನೇ ಬಾರಿ ಸಚಿವರ ಪಟ್ಟಿ ಬಿಡುಗಡೆ ವೇಳೆ ಶಾಸಕ ಪ್ರಸಾದ ಅಬ್ಬಯ್ಯ ಅವರ ಹೆಸರು ಇರುವಂತಾಗಬೇಕು ಎಂದರು.
ತಹಸೀಲ್ದಾರ್ ಮಹೇಶ ಗಸ್ತೆ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ರವಾನಿಸಲಾಯಿತು.