pramod mutalik ಪ್ರಧಾನ್ ರಾಜೀನಾಮೆಗೆ ಸಹಮತವಿಲ್ಲ

pramod mutalik ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್
pramod mutalik ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸ್ಪಷ್ಟೋಕ್ತಿ
ಹುಬ್ಬಳ್ಳಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ pramod mutalik ನಮ್ಮ ಬೆಂಬಲವಿದೆ. ಆದರೆ, ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆಗೆ ನಮ್ಮ ಸಹಮತವಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಆತ್ಯಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ಕೊಡಬೇಕು. ಪ್ರತಿಭಟನಾಕಾರರ ಮೇಲಿರುವ ಕೇಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಹೆಸರಲ್ಲಿ ಭಾರತ ಟುಕಡೆ ಗ್ಯಾಂಗ್ ಸಾಥ್ ನೀಡುತ್ತಿದೆ. ಶಿಕ್ಷಣ ವ್ಯವಸ್ಥೆ ಹದಗೆಡಿಸಿದ ಕಾಂಗ್ರೆಸ್, ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವುದು ಸರಿಯಲ್ಲ. ಐವರು ಮುಸ್ಲಿಮರನ್ನು ಕೇಂದ್ರ ಶಿಕ್ಷಣ ಸಚಿವರನ್ನಾಗಿ ಮಾಡಿ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದೆ. ಅಕ್ಬರ್, ಔರಂಗಜೇಬ, ಘಜ್ನಿ ಮಹ್ಮದ್, ಘೋರಿ ಮಹ್ಮದ್ ಇತಿಹಾಸವನ್ನು ಪಠ್ಯದ ಮೂಲಕ ಭಾರತೀಯರಿಗೆ ಹೇಳುವಂತೆ ಮಾಡಿದೆ. ಹಿಂದೂ ಧರ್ಮವನ್ನು ಹೋಳು ಮಾಡುವ ಇಂಥ ಶಿಕ್ಷಣ ವ್ಯವಸ್ಥೆ ನೀಡಿದ ಕಾಂಗ್ರೆಸ್‌ಗೆ ಯಾವ ನೈತಿಕತೆ ಇದೆ ಎಂದು ಕಿಡಿಯಾದರು.
60 ವರ್ಷ ಆಳ್ವಿಕೆ ಮಾಡಿದ್ದ ಕಾಂಗ್ರೆಸ್ ಅದಾಗಲೇ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದರೆ ಈ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಬರುತ್ತಿರಲಿಲ್ಲ. ಕೇಂದ್ರ ಬಿಜೆಪಿ ಸರ್ಕಾರವು ತಡವಾದರೂ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮುಂದಾಗಿರುವುದು ಶ್ಲಾಘನೀಯ. ಆದರೆ, ಸರ್ಕಾರ ಬಂದಾಗಲೇ ಜಾರಿಗೆ ತರಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ, ಹಿಂದುತ್ವ ಹಾಗೂ ಆರ್‌ಎಸ್‌ಎಸ್ ಟಾರ್ಗೆಟ್ ಮಾಡುವ ಉದ್ದೇಶ ಹೋರಾಟದಲ್ಲಿದೆ. ಇಂಥ ದಮನಕಾರಿ ಶಕ್ತಿಗಳನ್ನು ಹೊರಗಡೆ ಹಾಕಬೇಕು. ವಿದೇಶದಿಂದ ಬರುತ್ತಿರುವ ಫಂಡ್ ಅನ್ನು ಕೇಂದ್ರ ಸರ್ಕಾರ ತಡೆ ಹಿಡಿಯಬೇಕು. ಹೋರಾಟ ನ್ಯಾಯಯುತವಾಗಿದ್ದರೆ ಪರವಾಗಿಲ್ಲ, ಹಿಂಸಾತ್ಮಕವಾಗಿರುವಂತೆ ನೋಡಿಕೊಂಡಿರುವುದು ಸರಿಯಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net