(pramod mutalik) ಲವ್‌ಜಿಹಾದ್ ಕೇಸ್ ಎನ್‌ಐಎಗೆ ಒಪ್ಪಿಸಿ

ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆಯುಳ್ಳ ಮನವಿಯನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ (pramod mutalik)ಅವರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ಮಂಗಳವಾರ ಸಲ್ಲಿಸಿದರು.
ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆಯುಳ್ಳ ಮನವಿಯನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ (pramod mutalik)ಅವರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ಮಂಗಳವಾರ ಸಲ್ಲಿಸಿದರು.
Published on
ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಲವ್ ಜಿಹಾದ್ (pramod mutalik) ಪ್ರಕರಣದ ತನಿಖೆಯನ್ನು ಪೊಲೀಸರಿಗೆ ಒಪ್ಪಿಸದೆ, ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ವಹಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ಇಲ್ಲಿಯ ನವನಗರದ ಹು-ಧಾ ಪೊಲೀಸ್ ಆಯುಕ್ತಾಲಯದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಮ್ ಟ್ರೇನರ್ ಸಮೀರ್ ಮುಲ್ಲಾ ಬಂಧನವಾಗಿಲ್ಲ. ಅವನ ಸಹೋದರಿ ಹನಿಟ್ರಾೃಪ್ ಮಾಡುತ್ತಿದ್ದಾರೆ. ಲಕ್ಷಗಟ್ಟಲೆ ದುಡ್ಡು ಅವಳ ಬಳಿ ಹೇಗೆ ಬಂತು? ಕೇರಳಕ್ಕೆ ಏಕೆ ಹೋದಳು? ಧೈರ್ಯ ಇದ್ದರೆ ಎದುರಿಸಬೇಕಿತ್ತು. ಲವ್ ಜಿಹಾದ್ ಹಿಂದೆ ದೊಡ್ಡ ಜಾಲವೇ ಇದೆ. ಸಮೀರ್‌ನ ಇಡೀ ಕುಟುಂಬದ ಹಿಂದೆ ಇಸ್ಲಾಮಿಕ್ ಶಕ್ತಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಶ್ವಾಪುರದ ಹೋಟೆಲೊಂದರ ಮಾಲೀಕ ಬೇಪಾರಿ ಎಂಬಾತ ಮದುವೆ ಮಾಡಿಸ್ತೀನಿ ಅಂತ ಹೇಳುತ್ತಾನೆ. ದುಡ್ಡು ಕೊಡುವವರು ಲವ್‌ಜಿಹಾದ್ ಹಿಂದೆ ಇದ್ದಾರೆ. ಕೇರಳ ಲವ್‌ಜಿಹಾದ್‌ಗೂ ಇಲ್ಲಿಗೂ ಸಂಬಂಧ ಇದೆ. ಮಧ್ಯಪ್ರದೇಶದ ಮೊನಾಲಿಸಾ, ರಾಜಸ್ತಾನದ ಹುಡುಗ ಕೇರಳಕ್ಕೆ ಬಂದು ಮದುವೆ ಆದರು. ಇದು ಉದಾಹರಣೆ ಅಷ್ಟೇ, ಕೇರಳ ಸ್ಟೋರಿ 1,2 ಇದೆ. ಇನ್ನೂ ಸ್ಟೋರಿಗಳು ಇದ್ದಾವೆ. 4 ಸಾವಿರ ಕ್ರಿಶ್ಚಿಯನ್ನರು ಮತಾಂತರದಲ್ಲಿ ತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಕೂಡ ಕೇರಳದಲ್ಲಿ ಲವ್ ಜಿಹಾದ್‌ನಲ್ಲಿ ಸಾವಿರಾರರು ಜನರು ಇದ್ದಾರೆ ಎಂದು ದೂರಿದ್ದಾರೆ. ಹಾಗಾಗಿ ಈ ಪ್ರಕರಣಗಳನ್ನು ಎನ್‌ಐಎಗೆ ಒಪ್ಪಿಸಬೇಕು. ಪೊಲೀಸರಿಗೆ ಕೊಟ್ಟರೆ ಎಳೆದುಕೊಂಡು ಬಂದು ಬಿಟ್ಟು ಬಿಡುತ್ತಾರೆ. ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಪರ ಇದೆ. ಹಿಂದೂಗಳನ್ನೇ ಅರೆಸ್ಟ್ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಲವ್‌ಜಿಹಾದ್ ಸಂಬಂಧಪಟ್ಟಂತೆ ನಮ್ಮ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. 60 ಜನರ ಮೇಲೆ ಪೊಲೀಸರು ಕೇಸ್ ಹಾಕಿದ್ದಾರೆ. ಬಂಧನ ಆಗುವುದಿದ್ದರೆ ನನ್ನನ್ನೇ ಎ1 ಆರೋಪಿ ಮಾಡಿ ಬಂಧಿಸಬೇಕು. ಅಲ್ಲಿ ನಮ್ಮ ಕಾರ್ಯಕರ್ತರು 300 ಜನರು ಇದ್ದರು. ಕೇಸ್ ಹಾಕುವುದಿದ್ದರೆ ಅವರೆಲ್ಲರ ಮೇಲೆ ಹಾಕಬೇಕು. ಕೂಡಲೇ ನಮ್ಮ ಕಾರ್ಯಕರ್ತರ ಮೇಲಿನ ಕೇಸ್ ವಾರದೊಳಗೆ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು ವಿವಿಧ ಬೇಡಿಕೆಯುಳ್ಳ ಮನವಿಯನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರಿಗೆ ಸಲ್ಲಿಸಲಾಯಿತು.
ಶ್ರೀರಾಮ ಸೇನೆ ಉತ್ತರ ಪ್ರಾಂತ ಗೌರವ ಅಧ್ಯಕ್ಷ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ, ಪ್ರಮುಖರಾದ ಪ್ರವೀಣ ಮಾಳವದಕರ, ಬಸವರಾಜ ಗೌಡರ, ಅಣ್ಣಪ್ಪ ದಿವಟಗಿ, ಗುರನಗೌಡ ಪಾಟೀಲ, ಮಂಜುನಾಥ ಕಾಟಕರ, ಬಸವರಾಜ ದುರ್ಗದ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net