prahalad joshi ಸಕ್ಕರೆ ಬೆಲೆ ನಿಯಂತ್ರಣಕ್ಕೆ ಕ್ರಮ

prahalad joshi ಕೇಂದ್ರ ಸಚಿವ ಪ್ರಲ್ಹಾದ ಜೋಶಿ
prahalad joshi ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಸಕ್ಕರೆ ಬೆಲೆ ಏರಿಕೆಯನ್ನು ಸೂಕ್ಷ್ಮವಾಗಿ ಗಮನಹರಿಸಿದೆ. ಲಭ್ಯವಿರುವ ಸಕ್ಕರೆ ದಾಸ್ತಾನುಗಳನ್ನು ಮಾರುಕಟ್ಟೆಗೆ ಶೀಘ್ರವೇ ಬಿಡುಗಡೆ ಮಾಡಿ, ಬೆಲೆ ನಿಯಂತ್ರಣಕ್ಕೆ ತರಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ

prahalad joshi

ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ಹಳೆಯ ದರದಲ್ಲಿಯೇ ಸಕ್ಕರೆ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಆಯಾ ರಾಜ್ಯ ಸರ್ಕಾರಗಳಿಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ ಎಂದರು.
ವಾರ್ಷಿಕ ಸುಮಾರು 280ರಿಂದ 290 ಲಕ್ಷ ಟನ್, ಅಂದರೆ 28ರಿಂದ 29 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ದೇಶಕ್ಕೆ ಬೇಕು. ಆಹಾರ ಬಳಕೆ ಮತ್ತು ಕೈಗಾರಿಕೆಗಳ ಅಗತ್ಯಕ್ಕಾಗಿ ಈ ಪ್ರಮಾಣದ ಸಕ್ಕರೆ ಖರ್ಚಾಗುತ್ತದೆ. ಪ್ರಸ್ತುತ ಸುಮಾರು 306 ಲಕ್ಷ ಟನ್ ಸಕ್ಕರೆ ದಾಸ್ತಾನಿದೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಿದ್ದು, ಸಮರ್ಪಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಈ ಮೂಲಕ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ರಾಜಕೀಯ ಭ್ರಷ್ಟಾಚಾರಕ್ಕೆ ಆಶ್ರಯ ನೀಡುತ್ತಿದೆ. ರಾಜಕೀಯ ಅಜೆಂಡಾಗಳಿಗೆ ಸರ್ಕಾರದ ಹಣ ಬಳಸುವುದು ಸರಿಯಲ್ಲ. ಯುವ ಸಂಘಟನೆಗಳು ಹಾಗೂ ವಿವಿಧ ಸಮಿತಿಗಳಿಗೆ ನೆರವು ನೀಡುವುದಿದ್ದರೆ ಪಕ್ಷದ ಹಣದಿಂದಲೇ ಕೊಡಲಿ. ಸರ್ಕಾರದ ಹಣ ಏಕೆ ಬಳಸಬೇಕು? ಎಂದು ಪ್ರಶ್ನಿಸಿದರು.
ವಿವಿಧ ಸಂಘಟನೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ರಚಿಸಿ ಪಾಲಿಕೆಯ ಹಣವನ್ನು ಖರ್ಚು ಮಾಡುತ್ತಿರುವುದು ಅನ್ಯಾಯ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಪತ್ರ ಬರೆಯುವುದರ ಜತೆಗೆ ದೂರವಾಣಿ ಮೂಲಕವೂ ಮಾತನಾಡುವುದಾಗಿ ಹೇಳಿದರು.
ರಾಜ್ಯದ ಮಹಾನಗರ ಪಾಲಿಕೆಗಳಿಗೆ ಸರ್ಕಾರದಿಂದ ಬರಬೇಕಾದ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ಇದರಿಂದ ಸಿಬ್ಬಂದಿ ವೇತನ, ನೀರು ಸರಬರಾಜು ಸೇರಿ ಮೂಲಸೌಕರ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ. ರಸ್ತೆ, ಬೀದಿ ದೀಪ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿಗೂ ಅಗತ್ಯ ಹಣದ ಕೊರತೆ ಎದುರಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ವೋಟ್‌ಬ್ಯಾಂಕ್ ಹಾಗೂ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಜೋಶಿ, ಕಾಂಗ್ರೆಸ್ ನಾಯಕರು ಕೋಮುವಾದದ ಬಗ್ಗೆ ಮಾತನಾಡುವಾಗ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net