(prahalad joshi) ಕಠಿಣ ಕ್ರಮವಾಗದಿದ್ದರೆ ಹೋರಾಟ ಅನಿವಾರ್ಯ

ಹುಬ್ಬಳ್ಳಿಯ ವಿಕಾಸನಗರ ಸಂತ್ರಸ್ತೆ ಮನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (prahalad joshi)ಮಂಗಳವಾರ ಭೇಟಿ ನೀಡಿ, ಕುಟುಂಬದವರನ್ನು ಸಂತೈಸಿದರು.
ಹುಬ್ಬಳ್ಳಿಯ ವಿಕಾಸನಗರ ಸಂತ್ರಸ್ತೆ ಮನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (prahalad joshi)ಮಂಗಳವಾರ ಭೇಟಿ ನೀಡಿ, ಕುಟುಂಬದವರನ್ನು ಸಂತೈಸಿದರು.
Published on
ಹುಬ್ಬಳ್ಳಿ: ರಾಜ್ಯ ಸರ್ಕಾರ ಲವ್ ಜಿಹಾದ್ ಪ್ರಕರಣವನ್ನು ಹಿಂದೂ-ಮುಸ್ಲಿಂ ಎಂದು ರಾಜಕಾರಣ ಮಾಡಬಾರದು. ಇದರ ಹಿಂದೆ ದೊಡ್ಡ ಜಾಲವೇ ಇದೆ. ಇದನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (prahalad joshi) ಎಚ್ಚರಿಕೆ ನೀಡಿದರು.
ಇಲ್ಲಿಯ ವಿಕಾಸನಗರ ಸಂತ್ರಸ್ತೆ ಮನೆಗೆ ಮಂಗಳವಾರ ಭೇಟಿ ನೀಡಿ, ಕುಟುಂಬದವರಿಗೆ ಧೈರ್ಯ ತುಂಬಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್‌ಜಿಹಾದ್ ಘಟನೆ ಗೊತ್ತಾಗುತ್ತಿದ್ದಂತೆಯೇ ಪೊಲೀಸ್ ಆಯುಕ್ತರ ಜತೆಗೆ ಮಾತನಾಡಿದ್ದೇನೆ. ಗೃಹ ಡಾ. ಜಿ. ಪರಮೇಶ್ವರ ಅವರ ಜತೆಗೂ ಮಾತನಾಡುತ್ತೇನೆ ಎಂದರು.
ಸರಿಯಾದ ದಿಕ್ಕಿಯಲ್ಲಿ ಈ ಪ್ರಕರಣದ ತನಿಖೆ ನಡೆಯಬೇಕು. ಜೈಲಿನಲ್ಲಿದ್ದ ವ್ಯಕ್ತಿ ಅಪ್ರಾಪ್ತೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತೇನೆ ಎಂದರೆ ಎಷ್ಟು ವ್ಯವಸ್ಥೆ ದುರ್ಬಲವಾಗಿದೆ. ಪೊಕ್ಸೋ ಕಾಯ್ದೆಯಡಿ ಕಠಿಣ ಕ್ರಮವಾಗಬೇಕು. ಸಂತ್ರಸ್ತರ ಫೋಟೋ, ವಿಡಿಯೋ ಹೊರಗಡೆ ಹೋಗಿ, ವೈರಲ್ ಮಾಡುತ್ತಿರುವವರು ವಿರುದ್ಧ ಕ್ರಮ ಜರುಗಿಸಬೇಕು. ಸಮಾಜದ ಹಾಗೂ ಮಹಿಳೆಯರ ಸ್ವಾಸ್ಥೃ ಪ್ರಶ್ನೆ ಇದರಿಂದ ಎದುರಾಗಿದೆ. ಹುಬ್ಬಳ್ಳಿಯ ಹೋರಾಟವನ್ನು ಪೊಲೀಸ್ ಆಯುಕ್ತರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಹೋರಾಟವಾದರೆ ಇಡೀ ದೇಶಾದ್ಯಂತ ಪಸರಿಸಲಿದೆ ಎಂದರು.
ಉಪ ಮೇಯರ್ ಸಂತೋಷ ಚವ್ಹಾಣ, ಬಿಜೆಪಿ ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಪ್ರಮುಖರಾದ ವಿಠ್ಠಲ ಲದ್ವಾ, ಭಾಸ್ಕರ ಜಿತೂರ, ಹನುಮಂತಸಾ ನಿರಂಜನ, ರಾಜು ಜರತಾರಘರ, ವಿನಾಯಕ ಲದ್ವಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net