ಉದ್ಯೋಗಕಾಂಕ್ಷಿಗಳ ಪ್ರತಿಭಟನೆಗೆ ಪೊಲೀಸರ ತಡೆ

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ
Published on

ಸಿವಿಲ್​ ಕಾನ್ಸ್​ಟೇಬಲ್​ ನೇಮಕಾತಿ ಪರೀಕ್ಷೆಯಲ್ಲಿನ ಲೋಪಗಳನ್ನು ಖಂಡಿಸಿ ಮರುಪರೀಕ್ಷೆ ನಡೆಸಲು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ

ವಿದ್ಯಾರ್ಥಿ

ಸಂಘಟನೆ (ಅಕ್ಸಾ) ನಗರದಲ್ಲಿ ಮಂಗಳವಾರ ನಿಗದಿಪಡಿಸಿದ್ದ ಶಾಂತಿಯುತ ಪ್ರತಿಭಟನೆಯನ್ನು ಪೊಲೀಸರು ತಡೆಯೊಡ್ಡಿದರು. ಪ್ರತಿಭಟನಾ ಸ್ಥಳಕ್ಕೆ ತಲುಪುವ ಮೊದಲೇ ಸಂಘಟನೆಯ ಮುಖಂಡ ಕಾಂತಕುಮಾರ್​ ಸೇರಿ 10 ವಿದ್ಯಾರ್ಥಿಗಳನ್ನುಪೊಲೀಸರು ವಶಕ್ಕೆ ಪಡೆದರು.

ಸಂಟನೆಯ ಅಧ್ಯಕ್ಷ ಕಾಂತಕುಮಾರ್​ ನೇತೃತ್ವದಲ್ಲಿ ನಗರದ ಮಿಚಿಗನ್​ ಕಾಂಪೌಂಡ್​ನ ಉದ್ಯಾನದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರು. ಆದರೆ, ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಅಲ್ಲದೆ, ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ್​ ಅವರು ಡಿಸಿಪಿಗಳು, ಎಸಿಪಿಗಳು, ಇನ್ಸ್​ಪೆಕ್ಟರ್​ಗಳು, ಅಧಿಕಾರಿ, ಸಿಬ್ಬಂದಿ ಸೇರಿ ಸುಮಾರು 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದರು. ಮಂಗಳವಾರ ಬೆಳಗ್ಗೆಯಿಂದಲೇ ಕಾಂತಕುಮಾರ್​ ಪತ್ತೆಗಾಗಿ ಹಲವು ಪೊಲೀಸ್​ ತಂಡಗಳು ಶೋಧ ನಡೆಸಿದ್ದವು. ಮಧ್ಯಾಹ್ನ 12 ಗಂಟೆಯಾದರೂ ಕಾಂತಕುಮಾರ್​ ಕಾಣಿಸಿಕೊಂಡಿರಲಿಲ್ಲ. ಕೊನೆಗೆ ಕೋಚಿಂಗ್​ ಸೆಂಟರ್​ವೊಂದರಲ್ಲಿ ಪೊಲೀಸರು ಕಾಂತಕುಮಾರ್​ರನ್ನು ವಶಕ್ಕೆ ಪಡೆದು ಹುಬ್ಬಳ್ಳಿಯತ್ತ ಕರೆದುಕೊಂಡು ಹೋದರು.
ಇದೇವೇಳೆ ಪ್ರತಿಭಟನೆಗೆ ಸಾಥ್​ ಬೇರೆ ಜಿಲ್ಲೆಗಳ ಸುಮಾರು 10 ಮುಖಂಡರನ್ನು ಮಿಚಿಗನ್​ ಕಾಂಪೌಂಡ್​ ಬಳಿ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ನೇಮಕಾತಿ ಪ್ರಾಧಿಕಾರದ ಅಕ್ರಮ ಪ್ರಶ್ನಿಸುವುದು ಮತ್ತು ಶಾಂತಿಯುತ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿದ್ದಾರೆ ಎಂದು ಅಕ್ಸಾ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಸಪ್ತಾಪುರ, ಜಯನಗರ ಹಾಗೂ ಶ್ರೀನಗರ ಪ್ರದೇಶಗಳಲ್ಲಿ ಭಾರಿ ಬಂದೋಬಸ್ತ್​ ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net