ಪರಿಸ್ಥಿತಿ ಕೈಮೀರಬಾರದೆಂದು ವಶಕ್ಕೆ ಪಡೆದಿದ್ದೇವೆ

ಪೊಲೀಸ್ ಆಯುಕ್ತ ಎನ್.ಶಶಿಕುಮಾರ್
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆಗೆ ಅನುಮತಿ ಕೊಟ್ಟಿರಲಿಲ್ಲ
  • ಅಷ್ಟಾಗಿಯೂ ಬೆಳಗ್ಗೆ ಪ್ರತಿಭಟನಾಕಾರರು ಸೇರಿದ್ದರು
  • ಮುಂಜಾಗ್ರತಾ ಕ್ರಮವಾಗಿ 35 ಜನರನ್ನು ವಶಕ್ಕೆ
ಧಾರವಾಡ: ಪರಿಸ್ಥಿತಿ ಕೈಮೀರಬಾರದೆಂದು ವಿದ್ಯಾರ್ಥಿ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರ ವೇದಿಕೆ, ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಪ್ರತಿಭಟನೆಗೆ ಅನುಮತಿ ಕೋರಿದ್ದರು. ಎಷ್ಟು ಜನ ಬರುತ್ತಾರೆ ಎಂದು ಮಾಹಿತಿ ಕೇಳಿದ್ದೆವು. 30 ಸಾವಿರ ವಿದ್ಯಾರ್ಥಿಗಳು ಸೇರುತ್ತಾರೆಂಬ ಮಾಹಿತಿ ನೀಡಿ, ಇನ್ನುಳಿದ ಮಾಹಿತಿಯನ್ನು ಸರಿಯಾಗಿ ನೀಡಿರಲಿಲ್ಲ. ಕೆಲವು ಅತಿಥಿ ಗೃಹ, ಗ್ರಂಥಾಲಯದಲ್ಲಿ ಇರುವವರು ಅಹೋರಾತ್ರಿ ಧರಣಿ ಮತ್ತು ಜಂಕ್ಷನ್ ಬಂದ್ ಮಾಡುವುದಾಗಿ ಹೇಳಿದ್ದರು. 80 ಸಾವಿರ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇಲ್ಲಿ ಶಾಲೆ-ಕಾಲೇಜು ಆಸ್ಪತ್ರೆ ಇವೆ. ವಿದ್ಯಾರ್ಥಿ ಸಮುದಾಯ ಇರುವ ಈ ಪ್ರದೇಶದಲ್ಲಿ ಪರಿಸ್ಥಿತಿ ಲಾಭ ಪಡೆಯಲು ಕಿಡಿಗೇಡಿಗಳು ತಪ್ಪು ಕೆಲಸ ಮಾಡಿದರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ಪ್ರತಿಭಟನೆಗೆ ಅನುಮತಿ ಕೊಟ್ಟಿರಲಿಲ್ಲ ಎಂದರು.
ಅಷ್ಟಾಗಿಯೂ ಬೆಳಗ್ಗೆ ಪ್ರತಿಭಟನಾಕಾರರು, ಸ್ಥಳಿಯ ವಿದ್ಯಾರ್ಥಿಗಳು 200 ಜನರು ಸೇರಿದ್ದರು. ಯಾರಾದರೂ ಒಬ್ಬರು ತಪ್ಪು ಮಾಡಿದರೆ ಎಲ್ಲರಿಗೂ ಅದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಇದು ಕಾನೂನು ಬಾಹಿರ ಎಂದು ನಾನು ಹೇಳಿದ್ದೆ. ಅದಕ್ಕೆ ಒಪ್ಪದ ಅವರು ಜಿಲ್ಲಾಽಕಾರಿ ಕಚೇರಿವರೆಗೆ ಮೆರವಣಿಗೆ ಹೋಗುತ್ತೇವೆ ಎಂದಿದ್ದರು. ದಾರಿಯಲ್ಲಿ ಹಲವು ಕೋಚಿಂಗ್ ಸೆಂಟರ್ ಇವೆ. ಅಲ್ಲಿ ಪರಿಸ್ಥಿತಿ ಕೈ ಮೀರಬಾರದು ಎಂದು ನಾವು ಮುಂಜಾಗ್ರತಾ ಕ್ರಮವಾಗಿ 35 ಜನರನ್ನು ವಶಕ್ಕೆ ಪಡೆದೆವು ಎಂದರು.
ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಪ್ರತಿಭಟನೆ ಮಾಡಿದಾಗ ಕೆಲವರು ಅಸಭ್ಯ ಘೋಷಣೆ ಹಾಕಿದ್ದರು. ಜುಬಿಲಿ ವೃತ್ತ ಬಂದ್ ಮಾಡಿಸಿದ್ದರು. ಇದರಿಂದ ಜನರಿಗೆ ತೊಂದರೆ ಆಗಿತ್ತು. ಪ್ರತಿಭಟನೆ ಹತ್ತಿಕುವ ಪ್ರಶ್ನೆ ಇಲ್ಲ. ಪ್ರತಿಭಟನೆ ಮಾಡಲು ಸಮಾನ ಅವಕಾಶವಿದೆ. ಆದರೆ, ಅವಕಾಶ ನಿಯಮದಂತೆ ಮಾಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net