(pocso) ‘ಖಾಸಗಿ ವಿಡಿಯೋ’ ಬೆದರಿಕೆಯೊಡ್ಡಿದ್ದವಗೆ ಕೇಸ್

ಖಾಸಗಿ ವಿಡಿಯೋ ಮೂಲಕ ಬೆದರಿಕೆಯೊಡಿದ್ದ ಗೋವಾ ಮೂಲದ ಯುವಕ (pocso)
ಖಾಸಗಿ ವಿಡಿಯೋ ಮೂಲಕ ಬೆದರಿಕೆಯೊಡಿದ್ದ ಗೋವಾ ಮೂಲದ ಯುವಕ (pocso)
Published on
ಹುಬ್ಬಳ್ಳಿ: ಅಪ್ರಾಪ್ತೆಗೆ ಪ್ರೀತಿಸುವಂತೆ ಒತ್ತಾಯಿಸಿದ್ದಲ್ಲದೆ ಖಾಸಗಿ ವಿಡಿಯೋ ಮೂಲಕ ಬೆದರಿಕೆಯೊಡಿದ್ದ ಗೋವಾ ಮೂಲದ ಯುವಕನ ವಿರುದ್ಧ ಇಲ್ಲಿಯ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ(pocso) ಪ್ರಕರಣ ದಾಖಲಾಗಿದೆ.
ತಮ್ಮ ಪಾಲಕರೊಂದಿಗೆ 2022ರಲ್ಲಿ ಗೋವಾಕ್ಕೆ ತೆರಳಿ ಬಾಲಕಿ ವಾಸವಾಗಿದ್ದಳು. ಈ ವೇಳೆ ತನ್ನ ಮನೆ ಪಕ್ಕದಲ್ಲಿ ವಾಸಿಸುತ್ತಿದ್ದ ಯುವಕನಿಗೆ ಪರಿಚಯವಾಗಿದ್ದಳು. ಈ ವೇಳೆ ಬಾಲಕಿಗೆ ತನ್ನನ್ನು ಪ್ರೀತಿಸುವಂತೆ ಯುವಕ ಒತ್ತಾಯಿಸಿದ್ದ.
ಬಾಲಕಿ ನಿರಾಕರಿಸಿ, ಮರಳಿ ಹುಬ್ಬಳ್ಳಿಗೆ ಬಂದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲಕಿಯ ಪಾಲಕರು ಯುವಕನ ವಿರುದ್ಧ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net