ಪ್ಲಂಬರ್​ಗಳಿಗೆ (Plumber) ಸರ್ಕಾರದಿಂದ ಅಗತ್ಯ ನೆರವು

ಹುಬ್ಬಳ್ಳಿಯಲ್ಲಿ (Plumber) ಆಯೋಜಿಸಿರುವ ಎರಡು ದಿನಗಳ ಹುಬ್ಬಳ್ಳಿ ಧಾರವಾಡ ಜಿಲ್ಲಾ ಲೈಸನ್ಸ್ಡ್ ಪ್ಲಂಬರ್ ಸಂಘದ ರಜತ ಮಹೋತ್ಸವ ಹಾಗೂ ಪ್ಲಂಬಿಂಗ್ ವಸ್ತು ಪ್ರದರ್ಶನವನ್ನು ಶಾಸಕ ಎನ್.ಎಚ್. ಕೋನರಡ್ಡಿ ಭಾನುವಾರ ಉದ್ಘಾಟಿಸಿದರು. ಎಂ.ಆರ್. ಪಾಟೀಲ, ರಾಜೇಂದ್ರ ಮಹಿಪತಿ, ಎಂ.ಎಚ್. ಮುಲ್ಲಾ, ಅಬ್ದುಲನಬಿ ನದಾಫ್, ಇತರರು ಇದ್ದರು.

Published on
ಹುಬ್ಬಳ್ಳಿ: ಪ್ಲಂಬರ್​ಗಳು (Plumber) ಸೇರಿದಂತೆ ಎಲ್ಲ ಕಾರ್ವಿುಕರಿಗೆ ಅಗತ್ಯವಾದ ಸಹಾಯ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಆಯೋಜಿಸಿರುವ 2 ದಿನಗಳ ಹುಬ್ಬಳ್ಳಿ ಧಾರವಾಡ ಜಿಲ್ಲಾ ಲೈಸನ್ಸ್ಡ್ ಪ್ಲಂಬರ್ ಸಂಘದ ರಜತ ಮಹೋತ್ಸವ ಹಾಗೂ ಪ್ಲಂಬಿಂಗ್ ವಸ್ತು ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಬಹುಮಹಡಿ ಕಟ್ಟಡಗಳಲ್ಲಿ ಪ್ಲಂಬಿಂಗ್ ಕೆಲಸ ಅಪಾಯಕಾರಿಯಾಗಿರುತ್ತದೆ. ಹಾಗಾಗಿ ಎಲ್ಲ ಪ್ಲಂಬರ್​ಗಳು ಕಾರ್ವಿುಕ ಕಾರ್ಡ್ ಮಾಡಿಸಬೇಕು ಎಂದರು.
ನವಲಗುಂದದಲ್ಲಿ ಕಾರ್ವಿುಕರು ಹಾಗೂ ಬಡವರಿಗಾಗಿ 63 ಎಕರೆ ಪ್ರದೇಶದಲ್ಲಿ 3 ಸಾವಿರ ಮನೆಗಳನ್ನು ನಿರ್ವಿುಸಲಾಗುವುದು. ಇದೇ ರೀತಿ ಅಣ್ಣಿಗೇರಿಯಲ್ಲೂ 19 ಎಕರೆ ಭೂಮಿ ಖರೀದಿಸಲು ತೀರ್ಮಾನ ಮಾಡಿದ್ದೇವೆ. ಕೆಲಸ ಮಾಡಿ ತೋರಿಸುವ ಮೂಲಕ ಟೀಕೆ-ಟಿಪ್ಪಣಿಗಳಿಗೆ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಲಭ್ಯವಿರುವ ಸಿಎ ನಿವೇಶನವನ್ನು ಹುಬ್ಬಳ್ಳಿ-ಧಾರವಾಡ ಪ್ರಾಧಿಕಾರದಿಂದ ರಿಯಾಯಿತಿ ದರದಲ್ಲಿ ಕೊಡಿಸಲು ಪ್ರಯತ್ನಿಸುತ್ತೇನೆ. ಸಂಘದ ಕಟ್ಟಡ ನಿರ್ವಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಮಕಬೂಲ ಉಂಟವಾಲೆ ಮಾತನಾಡಿದರು. ಸಂಘದ ಗೌರವ ಕಾರ್ಯಾಧ್ಯಕ್ಷ ಎಂ. ಆರ್. ಪಾಟೀಲ ಸ್ವಾಗತಿಸಿದರು. ಗೌರವಾಧ್ಯಕ್ಷ ನಾಗರಾಜ ಕಲಘಟಗಿ, ರಾಜೇಂದ್ರ ಮಹಿಪತಿ, ಎಂ.ಎಚ್. ಮುಲ್ಲಾ, ಅಬ್ದುಲನಬಿ ನದಾಫ್, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net