ಪಿರಮಿಡ್ ಧ್ಯಾನ ಮಂದಿರ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ಯೋಗಾಸನವು ಬಹಿರಂಗ ಯೋಗವಾದರೆ, ಧ್ಯಾನವು ಅಂತರಂಗದ ಯೋಗ. ಧ್ಯಾನದಿಂದ ಮನುಷ್ಯನ ಆಲೋಚನಾ ಶಕ್ತಿ, ಭಾವನಾ ಶಕ್ತಿ ಮತ್ತು ಇಚ್ಛಾಶಕ್ತಿಗಳು ಒಂದೇ ದಿಕ್ಕಿನಲ್ಲಿ ಹರಿದು ಏಕಾಗ್ರತೆ ಮೂಡುವುದು. ಅದರಿಂದ ಮನಸ್ಸಿಗೆ ನೆಮ್ಮದಿ, ಸಂತಸ ಮತ್ತು ಉಲ್ಲಾಸ ಉಂಟಾಗಲಿದೆ. ಬೆಳಗ್ಗೆ ಧ್ಯಾನ ಮಾಡುವ ರೂಢಿಯಿಟ್ಟುಕೊಂಡರೆ ಇಡೀ ದಿನವೆಲ್ಲ ಚಟುವಟಿಕೆಯಿಂದಿರಲು ಸಾಧ್ಯ ಎಂದರು.