ಹುಬ್ಬಳ್ಳಿ: pilot speech ಸಂಸ್ಕಾರ ಇಂಗ್ಲಿಷ್ ಮೀಡಿಯಂ ಸ್ಕೂಲ್ನಲ್ಲಿ 9ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಹೈದರಾಬಾದ್ನ ಆರ್ಆರ್ ಜೆಟ್ಸ್ ವಾಣಿಜ್ಯ ವಿಮಾನದ ಪೈಲಟ್ ದಿಲೀಪ ಎಸ್. ಜೈನ್ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದರು. ಇದು ವಿದ್ಯಾರ್ಥಿಗಳಿಗೆ ಅಪರೂಪದ ಅವಕಾಶ ಮತ್ತು ವಿಮಾನಯಾನ ಪ್ರಪಂಚ ಮತ್ತು ವಾಣಿಜ್ಯ ಪೈಲಟ್ ಪ್ರಯಾಣದ ಬಗ್ಗೆ ಅವರು ವಿವರ ನೀಡಿದರು.
ತಮ್ಮ ವೃತ್ತಿ ಅನುಭವಗಳನ್ನು ಹಂಚಿಕೊಂಡ ದಿಲೀಪ ಅವರು, ವಾಯುಯಾನ ಉದ್ಯಮ, ಇದಕ್ಕೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ, ಪೈಲಟ್ ಪ್ರವೇಶ ಪರೀಕ್ಷೆಗಳು, ತರಬೇತಿ ಪ್ರಕ್ರಿಯೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಶಿಸ್ತು, ಬದ್ಧತೆ ಮತ್ತು ನಿರಂತರ ಕಲಿಕೆಯನ್ನು ಈ ವೃತ್ತಿ ಬಯಸುತ್ತದೆ. ವಿದ್ಯಾರ್ಥಿಗಳು ಜಗತ್ತಿನ ದೊಡ್ಡ ನಗರಗಳಿಗೂ ಹೋಗಿ ಅಗತ್ಯ ತರಬೇತಿ ಪಡೆಯಬಹುದು. ವಿಶ್ವದಲ್ಲಿ ಪೈಲಟ್ಗಳಿಗೆ ಸಾಕಷ್ಟು ಅವಕಾಶಗಳಿವೆ. ಹೆಚ್ಚು ಭಾರತೀಯ ಮಹಿಳೆಯರು ವಿಮಾನಯಾನ ಉದ್ಯಮಕ್ಕೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.