ಒಂದೇ ವೇದಿಕೆಯಲ್ಲಿ ದಂಪತಿಗೆ ಪಿಎಚ್​.ಡಿ ಪ್ರದಾನ

ಪತಿ- ಪತ್ನಿಗೆ ಪಿಎಚ್​.ಡಿ
ಪತಿ- ಪತ್ನಿಗೆ ಪಿಎಚ್​.ಡಿ
Published on
ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ 75ನೇ ಟಿಕೋತ್ಸವದ ವೇದಿಕೆಯಲ್ಲಿ ಪತಿ- ಪತ್ನಿ ಪಿಎಚ್​.ಡಿ ಸ್ವೀಕರಿಸುವ ಮೂಲಕ ವಿಶೇಷ ಸಾಧನೆಗೆ ಪಾತ್ರರಾದರು.
ಬೆಳಗಾವಿ ಮೂಲದ ಮಹಾಂತೇಶ ಕಂಬಾರ ಹಾಗೂ ಪತ್ನಿ ಆರತಿ ಹಟ್ಟಿಹೊಳಿ ಎಂಎಸ್​.ಸಿ ಮಾನವಶಾಸ್ತ್ರ ವಿಷಯದಲ್ಲಿ ಪಿಎಚ್​.ಡಿ ಪಡೆದರು. ಕವಿವಿಯಲ್ಲಿ ಇಬ್ಬರೂ ಒಟ್ಟಿಗೇ ಪಿಎಚ್​.ಡಿಗೆ ಸೇರಿದ್ದರು. ಸ್ನೇಹಿತರಾಗಿದ್ದ ಇಬ್ಬರೂ ಮದುವೆಯಾಗಿದ್ದಾರೆ. ಮಹಾಂತೇಶ ಕಂಬಾರ ಒಂದೂವರೆ ವರ್ಷದಿಂದ ಬೆಳಗಾವಿ ರಾಣಿ ಚನ್ನಮ್ಮ ವಿವಿ ಸಿಂಡಿಕೇಟ್​ ಸದಸ್ಯರಾಗಿದ್ದಾರೆ. ಅವರ ಪತ್ನಿ ಆರತಿ ಹಟ್ಟಿಹೊಳಿ ಕವಿವಿಯಲ್ಲಿ ಸಂಶೋಧನಾ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net