pf announcement ಭವಿಷ್ಯ ನಿಧಿ ಟ್ರಸ್ಟ್​ಗಳ ಸಕ್ರಮಕ್ಕೆ ಅಮ್ನೆಸ್ಟಿ

pf announcement ಹುಬ್ಬಳ್ಳಿ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿ.
pf announcement ಹುಬ್ಬಳ್ಳಿ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿ.
Published on
ಹುಬ್ಬಳ್ಳಿ: pf announcement ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ ಒ) "ಅಮ್ನೆಸ್ಟಿ 2026' ಯೋಜನೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.
ಕೇಂದ್ರ ಸರ್ಕಾರವು ಜೂನ್​ 29ರಂದು ಅಧಿಸೂಚಿಸಿರುವ ಇಪಿಎಫ್​ ಯೋಜನೆ, 2026ರ ಭಾಗ ಸಿ ಅಡಿಯಲ್ಲಿ ಈ ಯೋಜನೆ ಪರಿಚಯಿಸಲಾಗಿದೆ. ನಿರ್ದಿಷ್ಟ ಭವಿಷ್ಯ ನಿಧಿ ಟ್ರಸ್ಟ್​ಗಳ ವಿನಾಯಿತಿ ಸ್ಥಾನಮಾನವನ್ನು ಸಕ್ರಮಗೊಳಿಸುವುದು ಇದರ ಉದ್ದೇಶವಾಗಿದೆ.
ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ಮಾನ್ಯತೆ ಪಡೆದಿದ್ದರೂ, ಉದ್ಯೋಗಿಗಳ ಭವಿಷ್ಯ ನಿಧಿ ಕಾಯ್ದೆ ಅಡಿಯಲ್ಲಿ ಅಥವಾ ಸಾಮಾಜಿಕ ಭದ್ರತಾ ಸಂಹಿತೆ ಅಡಿಯಲ್ಲಿ ಇದುವರೆಗೆ ಔಪಚಾರಿಕ ವಿನಾಯಿತಿ ಪಡೆಯದ ಭವಿಷ್ಯ ನಿಧಿ ಟ್ರಸ್ಟ್​ಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಈ ಯೋಜನೆಯು ಅನ್ವಯಿಸುತ್ತದೆ.
ಯೋಜನೆಯ ಅವಧಿ ಅಮ್ನೆಸ್ಟಿ 2026 ಯೋಜನೆಯು ಅಧಿಸೂಚನೆಯ ದಿನಾಂಕದಿಂದ ಆರು ತಿಂಗಳವರೆಗೆ ಅಂದರೆ 2026ರ ಡಿಸೆಂಬರ್​ 28ರ ವರೆಗೆ ಮಾನ್ಯವಾಗಿರುತ್ತದೆ.
ಕೇಂದ್ರಿಯ ಟ್ರಸ್ಟಿಗಳ ಮಂಡಳಿಯ (ಸಿಬಿಟಿ) ಶಿಫಾರಸಿನ ಮೇರೆಗೆ ಈ ಅವಧಿಯನ್ನು ಆರು ತಿಂಗಳು ಮೀರದಂತೆ ಮತ್ತಷ್ಟು ವಿಸ್ತರಿಸಬಹುದಾಗಿದೆ. ಪ್ರಮುಖ ಪ್ರಯೋಜನಗಳು ಮತ್ತು ವಿನಾಯಿತಿಗಳು ಅಮ್ನೆಸ್ಟಿ 2026ಕ್ಕೆ ಅರ್ಜಿ ಸಲ್ಲಿಸುವ ಸಂಸ್ಥೆಗಳಿಗೆ ಪೂರ್ವಾನ್ವಯವಾಗಿ (ರೆಟ್ರೋಸ್ಪೆಕ್ಟಿವ್​) ವಿನಾಯಿತಿಯನ್ನು ನೀಡಲಾಗುವುದು.
ಇದರ ಪ್ರಯೋಜನ ಪಡೆಯಲು ನಿಗದಿತ ಅನೆಕ್ಸರ್​ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ವೈಯಕ್ತಿಕ ಸದಸ್ಯರ ಲೆಡ್ಜರ್​ ಖಾತೆಗಳು ಸೇರಿದಂತೆ ಟ್ರಸ್ಟ್​ನ ಖಾತೆಗಳನ್ನು ಕಟ್​-ಆಫ್​ ದಿನಾಂಕದವರೆಗೆ ಸಿಎ ಅವರಿಂದ ಲೆಕ್ಕಪರಿಶೋಧನೆ ಮಾಡಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಟ್ರಸ್ಟ್​ನಲ್ಲಿ ಭಾಗವಹಿಸುವ ಉದ್ಯೋಗಿಗಳ ಯುಎಎನ್​, ಪಾನ್​, ಆಧಾರ್​ ಮತ್ತು ಬ್ಯಾಂಕ್​ ಖಾತೆ ಸಂಖ್ಯೆ ಸೇರಿದಂತೆ ಕೆವೈಸಿ ವಿವರಗಳನ್ನು ನವೀಕರಿಸಬೇಕು. ವಿಶೇಷ ಲೆಕ್ಕಪರಿಶೋಧನೆಯ ವೆಚ್ಚವನ್ನು ಭರಿಸಬೇಕು, ಮತ್ತು ಅರ್ಜಿ ಸಲ್ಲಿಸಿದ ದಿನಾಂಕದಿಂದ ಮೂರು ತಿಂಗಳೊಳಗೆ ಇದನ್ನು ಪೂರ್ಣಗೊಳಿಸಬೇಕು.
ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಅರ್ಹ ಸಂಸ್ಥೆಗಳು ಈ ಒಂದು ಬಾರಿಯ ಕ್ಷಮಾದಾನ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ವಿವರಗಳಿಗೆ ಹಾಗೂ ಸಹಾಯಕ್ಕಾಗಿ ಪ್ರಾದೇಶಿಕ/ ಜಿಲ್ಲಾ ಕಚೇರಿಗಳಲ್ಲಿ ಮೀಸಲಾದ ಅಮ್ನೆಸ್ಟಿ ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಅಮ್ನೆಸ್ಟಿ 2026 ನೋಡಲ್​ ಅಧಿಕಾರಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ, ಪ್ರಾದೇಶಿಕ ಕಚೇರಿ, ಹುಬ್ಬಳ್ಳಿ ಇಲ್ಲಿ ಸಂಪರ್ಕಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net