ಸ್ವಚ್ಛತೆಗೆ (cleanliness.) ಜನರ ಸಹಭಾಗಿತ್ವವೂ ಅಗತ್ಯ

(cleanliness.) ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನವನ್ನು ಹಸಿರು ನ್ಯಾಯಾಧೀಕರಣ ಮಂಡಳಿ ರಾಜ್ಯಮಟ್ಟದ ಗೌರವ ಅಧ್ಯಕ್ಷ ಸುಭಾಷ ಅಡಿ ಉದ್ಘಾಟಿಸಿದರು. ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಈರೇಶ ಅಂಚಟಗೇರಿ ಹಾಗೂ ಇತರರು ಇದ್ದರು.
(cleanliness.) ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನವನ್ನು ಹಸಿರು ನ್ಯಾಯಾಧೀಕರಣ ಮಂಡಳಿ ರಾಜ್ಯಮಟ್ಟದ ಗೌರವ ಅಧ್ಯಕ್ಷ ಸುಭಾಷ ಅಡಿ ಉದ್ಘಾಟಿಸಿದರು. ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಈರೇಶ ಅಂಚಟಗೇರಿ ಹಾಗೂ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾ. ಸುಭಾಷ ಅಡಿ ಅಭಿಮತ
  • ಜನರ ಸಹಭಾಗಿತ್ವವೂ ಅಗತ್ಯ
  • ಕಟ್ಟಡ ತ್ಯಾಜವನ್ನು ರಸ್ತೆಗೆ ಎಸೆಯಬಾರದು.
ಸ್ವಚ್ಛ ಭಾರತ 2.0 ಅಡಿ ಸಾರ್ವಜನಿಕರಿಗೆ ಹಾಗೂ ನಗರ ಪಾಲುದಾರರಿಗೆ ಮಹಾನಗರ ಪಾಲಿಕೆಯು ‘ಸ್ವಚ್ಛತೆಯಲ್ಲಿ ಹುಬ್ಬಳ್ಳಿ-ಧಾರವಾಡ ನಾಗರಿಕರ ಪಾತ್ರ’ ಶೀರ್ಷೆಯಡಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಜ್ಯವನ್ನು ಮೂಲದಿಂದಲೇ ವಿಂಗಡಿಸಬೇಕು. ಈ ಕುರಿತು ಪಾಲಿಕೆ ಸದಸ್ಯರು ತಮ್ಮ ವಾರ್ಡ್​ಗಳಲ್ಲಿ ನಾಗರಿಕರಿಗೆ ತಿಳಿವಳಿಕೆ ನೀಡಬೇಕು. ಇದಕ್ಕಾಗಿ ಕೆಲವರಿಗೆ ಜವಾಬ್ದಾರಿಯನ್ನೂ ನೀಡಬೇಕು ಎಂದು ತಿಳಿಸಿದರು.
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಇದ್ದರೂ ಇನ್ನೂ ಬಳಕೆಯಲ್ಲಿರುವುದು ಕಳವಳಕಾರಿ ಸಂಗತಿ. ಈ ಪ್ಲಾಸ್ಟಿಕ್ ಬಳಕೆ ಮಾಡುವವರಿಗೆ ಮೊದಲು ತಿಳಿವಳಿಕೆ ನೀಡಬೇಕು. ಆದರೂ, ಬಳಕೆ ನಿಲ್ಲದಿದ್ದರೆ ದಂಡ ಆಕರಣೆಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕಟ್ಟಡ ತ್ಯಾಜವನ್ನು ರಸ್ತೆಗೆ ಎಸೆಯಬಾರದು. ಪಾಲಿಕೆಯವರು ಕಟ್ಟಡ ತ್ಯಾಜ್ಯವನ್ನು ಶುಲ್ಕ ಪಡೆದು ಸಂಗ್ರಹಿಸಬೇಕು. ಇದರಿಂದ ಪಾಲಿಕೆಗೂ ಆದಾಯ ಬರುತ್ತದೆ ಎಂದರು.
ಸಾರ್ವಜನಿಕರು ಸೇರಿದಂತೆ ರಾಜಕಾರಣಿಗಳು ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದನ್ನು ಬಿಡಬೇಕು. ನಗರ ಸುಂದರವಾಗಿರಬೇಕೆಂದರೆ ಗೋಡೆಗಳು ಸ್ವಚ್ಛವಾಗಿರಬೇಕು. ಫುಟ್​ಪಾತ್ ಅತಿಕ್ರಮಣ ತಡೆಗಟ್ಟಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಕಸ ಚೆಲ್ಲುತ್ತಿದ್ದ ಬ್ಲಾಕ್​ಸ್ಪಾಟ್​ಗಳನ್ನು ಗುರುತಿಸಿ, ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ಬೆಂಚ್​ಗಳನ್ನು ಹಾಕಲಾಗಿದೆ. ಆದರೂ, ಒಂದೆರೆಡು ದಿನ ಬಿಟ್ಟು ಜನರು ಮತ್ತೆ ಅದೇ ಜಾಗದಲ್ಲಿ ಕಸ ಚೆಲ್ಲುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸಭಾನಾಯಕ ಈರೇಶ ಅಂಚಟಗೇರಿ, ಪ್ರತಿಪಕ್ಷ ನಾಯಕ ಇಮ್ರಾನ್ ಎಲಿಗಾರ, ಪರಿಸರ ಅಧಿಕಾರಿ ಜಗದೀಶ ಐ.ಎಚ್., ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಸದಸ್ಯರಾದ ಸುರೇಶ ಬೇದ್ರೆ, ಮೀನಾಕ್ಷಿ ಒಂಟಮೂರಿ ಹಾಗೂ ಇತರರು ಇದ್ದರು.
ನಂತರ ನಡೆದ ಸಂವಾದದಲ್ಲಿ ಮಾತನಾಡಿದ ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಸುಧಾಕರ ಶೆಟ್ಟಿ, ಉಪಹಾರ ಪಾರ್ಸಲ್ ಕೊಡುವಾಗ ಏಕಬಳಕೆ ಪ್ಲಾಸ್ಟಿಕ್ ಬದಲಾಗಿ ಬೇರೆ ಚೀಲಗಳನ್ನು ಬಳಸಿದರೆ 5 ರಿಂದ 6 ರೂ. ಶುಲ್ಕವನ್ನು ಗ್ರಾಹಕರಿಂದ ಹೆಚ್ಚಿಗೆ ಪಡೆಯಬೇಕಾಗುತ್ತದೆ. ಹೆಚ್ಚಿನ ಶುಲ್ಕ ಭರಿಸಲು ಗ್ರಾಹಕರು ನಿರಾಕರಿಸುತ್ತಾರೆ ಎಂದು ಹೇಳಿದರು.
ಏಕಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ ಇದ್ದರೂ ಮಹಾನಗರಕ್ಕೆ ಬರುವ ಪ್ಲಾಸ್ಟಿಕ್ ಸರಬರಾಜು ನಿಂತಿಲ್ಲ. ಮೊದಲು ಈ ಸರಬರಾಜು ನಿಲ್ಲಬೇಕು. ಏಕ ಬಳಕೆ ಪ್ಲಾಸ್ಟಿಕ್ ಬಳಸುವವರಿಗೆ ದಂಡ ಹಾಕುವ ಪಾಲಿಕೆ, ತಗ್ಗು ಬಿದ್ದಿರುವ ರಸ್ತೆಗಳ ದುರಸ್ತಿಯತ್ತಲೂ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net