ಪಾಲಿಕೆಯಿಂದ ಜನಸ್ನೇಹಿ, ಪಾರದರ್ಶಕ ಆಡಳಿತ corporation

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮಹಾನಗರ ಪಾಲಿಕೆ (corporation) ಆಯುಕ್ತ ಡಾ. ರುದ್ರೇಶ ಘಾಳಿ ಧ್ವಜಾರೋಹಣ ನೆರವೇರಿಸಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮಹಾನಗರ ಪಾಲಿಕೆ (corporation) ಆಯುಕ್ತ ಡಾ. ರುದ್ರೇಶ ಘಾಳಿ ಧ್ವಜಾರೋಹಣ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಿರಂತರ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿ ಇದೆ.
  • ನಾಗರಿಕರ ಸಹಕಾರವೂ ಅಗತ್ಯ.
  • ಎಲ್​ಇಡಿ ಬೀದಿದೀಪಗಳನ್ನು ಅಳವಡಿಸುವ ಯೋಜನೆ ಆರಂಭಗೊಂಡಿದೆ.
ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 15 ನೇ ಹಣಕಾಸು, ಎಸ್​ಎಫ್​ಸಿ ಅನುದಾನ, ಅಮೃತ ಯೋಜನೆ, ಪಾಲಿಕೆ ಸಾಮಾನ್ಯ ನಿಧಿ ಸೇರಿದಂತೆ ವಿವಿಧ ಅನುದಾನದಲ್ಲಿ ಅವಳಿ ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಚುರುಕಾಗಿ ನಡೆಯುತ್ತಿವೆ. ವಿಶ್ವಬ್ಯಾಂಕ್ ನೆರವನಿನೊಂದಿಗೆ ಎಲ್ಲ ವಾರ್ಡ್​ಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿ ಇದೆ ಎಂದು ತಿಳಿಸಿದರು.
ಇದೇ ಫೆಬ್ರುವರಿಯಿಂದ 43 ಎಂಎಲ್​ಡಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ. ಎಲ್​ಇಡಿ ಬೀದಿದೀಪಗಳನ್ನು ಅಳವಡಿಸುವ ಯೋಜನೆ ಆರಂಭಗೊಂಡಿದೆ. ಉತ್ತಮ ರಸ್ತೆ, ಅಭಿವೃದ್ಧಿ ಹೊಂದಿದ ಉದ್ಯಾನದ ಜತೆಗೆ ಆರೋಗ್ಯಯುತ ಸ್ವಚ್ಛ ಮತ್ತು ಸುಂದರ ಮಹಾನಗರ ನಿರ್ವಿುಸುವ ಗುರಿ ಸಾಧನೆಗೆ ನಾಗರಿಕರ ಸಹಕಾರವೂ ಅಗತ್ಯ ಎಂದು ಹೇಳಿದರು. ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಚಂದ್ರಿಕಾ ಮೇಸ್ತ್ರಿ, ಮೀನಾಕ್ಷಿ ವಂಟಮುರಿ, ಶೀಲಾ ಕಾಟಕರ, ಪ್ರೀತಿ ಖೋಡೆ, ಹುಸೇನಬಿ ನಾಲ್ವತ್ತವಾಡ, ಇತರರು ಇದ್ದರು.
ನಂತರ ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಮೇಯರ್ ಜ್ಯೋತಿ ಪಾಟೀಲ ಅವರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net