Mega ಪತಂಜಲಿ ಯೋಗಪೀಠದ ರಾಜ್ಯಪ್ರಭಾರಿ ಭವರಲಾಲ್ ಆರ್ಯ ಅವರು ಆರ್ಯ ಎಂಟರ್ಪ್ರೖೆಸಿಸ್ ವತಿಯಿಂದ ಕೇಶ್ವಾಪುರದ ರಮೇಶ ಭವನ ರಸ್ತೆಯ ಶ್ರೀ ನಾಕೋಡಾ ಜೈನ ಮಂದಿರ ಬಳಿಯ ಅರ್ಬನ್ ಸ್ಕೆ್ವೖರ್ನಲ್ಲಿ ನೂತನವಾಗಿ ಆರಂಭಿಸಿರುವ ಪತಂಜಲಿ ಮೆಗಾ ಸ್ಟೋರ್ ಗುರುವಾರ ಲೋಕಾರ್ಪಣೆಗೊಂಡಿತು.
ಉದ್ಘಾಟಿಸಿದ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು, ಆಯುರ್ವೆದ ಉತ್ಪನ್ನಗಳನ್ನು ಹೊಂದಿರುವ ಈ ಮಳಿಗೆಯ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪತಂಜಲಿ ಯೋಗಪೀಠದ ಬಾಬಾ ರಾಮದೇವ ಗುರೂಜಿ ಅವರು ಹುಬ್ಬಳ್ಳಿಯಲ್ಲಿ ಬಹಿರಂಗವಾಗಿ ಯೋಗಾಭ್ಯಾಸ ಮಾಡಿಸುವ ಮೂಲಕ ಹೊಸ ದಾಖಲೆ ಮಾಡಿದ್ದರು. ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಜನರು ಹುಬ್ಬಳ್ಳಿಗೆ ಬಂದು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಖ್ಯಾತನಾಮ ವೈದ್ಯರು ಸಹ ಈ ಶಿಬಿರದಲ್ಲಿ ಭಾಗವಹಿಸಿದ್ದರು ಎಂದರು.
ಮಹಾವೀರ ಲಿಂಬ್ ಸೆಂಟರ್ನ ಚೇರ್ಮನ್ ಮಹೇಂದ್ರ ಸಿಂಘಿ ಮಾತನಾಡಿ, ಯಾವ ಪ್ರದೇಶದಲ್ಲಿ ವಾಸಿಸುತ್ತೇವೆಯೋ ಆ ಪ್ರದೇಶದ ಭಾಷೆ ಕಲಿಯುವುದು ಒಳ್ಳೆಯ ಅಭ್ಯಾಸ.
ಅದೇ ರೀತಿ, ಭವರಲಾಲ್ ಆರ್ಯ ಅವರು ಕರ್ನಾಟಕಕ್ಕೆ ಬಂದು, ಕನ್ನಡ ಭಾಷೆಯನ್ನು ಅತ್ಯುತ್ತಮವಾಗಿ ಕಲಿತಿದ್ದಾರೆ ಎಂದರು.
ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ್ ಹೊನಕಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಪೊಲೀಸರಿಗೆ ಯೋಗ ಹಾಗೂ ವಚನಗಳನ್ನು ಕಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಭವರಲಾಲ್ ಆರ್ಯ, ಕಲಬೆರಕೆ ಇಲ್ಲದ ಪದಾರ್ಥಗಳಿಂದ ತಯಾರಿಸಿದ ಅಡುಗೆ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿತ್ಯದ ಜೀವನದಲ್ಲಿ ದೇಸಿ ಪದಾರ್ಥಗಳನ್ನು ಬಳಸಬೇಕು ಎಂದು ತಿಳಿಸಿದರು.
ಉದ್ಯಮಿ ರಮೇಶ ಬಾಫಣಾ, ಲೆಕ್ಕ ಪರಿಶೋಧಕ ರಾಮಚಂದ್ರ ಹೆಗಡೆ, ಸುಭಾಷ ಡಂಕ, ಇತರರು ಇದ್ದರು.