ಧಾರವಾಡ: ಜ್ಞಾನದ ಅಗ್ನಿಯಲ್ಲಿ ಜೀವನದ ತೇಜಸ್ಸು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ. ಅಗ್ನಿಯು ಪ್ರಜ್ವಲಿಸುವುದರೊಂದಿಗೆ ಕತ್ತಲೆಯನ್ನು ಕಳೆದು ಜ್ಞಾನವನ್ನು ವೃದ್ಧಿಸುತ್ತದೆ. ಜ್ಞಾನದ ಅಗ್ನಿಯು ಪ್ರಗತಿಗೆ ಪೂರಕವಾಗಿದ್ದು, ಜೀವನದ ಸವಾಲುಗಳನ್ನು ಜಯಿಸಲು ಸಹಾಯ ಮಾಡುತ್ತದೆ ಎಂದು ಎಸ್ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ ಹೇಳಿದರು.
ನಗರದ ಎಸ್ಡಿಎಂ ಭೌತಿಕ ಚಿಕಿತ್ಸಾ ಕಾಲೇಜಿನ ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗ ಆಯೋಜಿಸಿದ್ದ ಪರ್ವ- 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಡಿಎಂ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಫಿಸಿಯೋಥೆರಪಿ ಕಾಲೇಜಿನ ಪ್ರಾಚಾರ್ಯ ಮತ್ತು ಸಂಯೋಜಕ ಡಾ. ಸಂಜಯ್ ಪರಮಾರ, ಉಪ ಸಂಯೋಜಕ ಡಾ. ಅನಿಲ, ಉಪ ಪ್ರಾಚಾರ್ಯ ಡಾ. ವಿದ್ಯಾ ಪಾಟೀಲ, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಸಿಲ್ವಿಯಾ ಮತ್ತು ಕ್ಯಾರೆನ್ ಸ್ವಾಗತಿಸಿದರು. ವಿಕ್ಟೋರಿಯಾ ಪರ್ವ ಕಾರ್ಯಕ್ರಮ ವಿಶ್ಲೇಷಿಸಿದರು. ಆಂಜೆಲ್ ವಂದಿಸಿದರು.