ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಶಿಕ್ಷಣ ವರ್ಗಗಳು ಮುಕ್ತಾಯಗೊಂಡಿವೆ.
ಪ್ರತಿಯೊಬ್ಬರೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡಬೇಕು.
ಎನ್ಡಿಎ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು
ಹುಬ್ಬಳ್ಳಿ:
ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.
ಸೆಂಟ್ರಲ್ ಕ್ಷೇತ್ರದಲ್ಲಿ ಈಗಾಗಲೇ ಪ್ರಶಿಕ್ಷಣ ವರ್ಗಗಳು ಮುಕ್ತಾಯಗೊಂಡಿವೆ. ಎಲ್ಲ ಅಪೇಕ್ಷಿತರು ಭಾಗವಹಿಸಿ ಎರಡು ದಿನ ಶಿಬಿರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲಾಗಿದೆ ಎಂದು ಹೇಳಿದರು.
ಪಕ್ಷದಲ್ಲಿ ಸಂಘಟನೆಯ ಕಾರ್ಯ ಮುಖ್ಯ. ನಾವೆಲ್ಲ ಪಕ್ಷ ಸಂಘಟನೆಯಿಂದ ಈ ಮಟ್ಟಕ್ಕೆ ಬೆಳೆದವರು. ಪ್ರತಿಯೊಬ್ಬರೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡಬೇಕು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದರು.
ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಸಂತೋಷ ಚವ್ಹಾಣ, ಕ್ಷೇತ್ರದ ಬಿ ಎಲ್ಎ ಪ್ರಶಾಂತ ಜಾಧವ, ರಾಮನಗೌಡ ಶೆಟ್ಟನಗೌಡರ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ ಹಾಗೂ ಇತರರಿದ್ದರು.