panchamasali peetha ಪಂಚಮಸಾಲಿ ಪೀಠ ಸಮಸ್ಯೆ ಶೀಘ್ರ ತಾರ್ಕಿಕ ಅಂತ್ಯ
ಹುಬ್ಬಳ್ಳಿಯಲ್ಲಿ ಬುಧವಾರ ಪಂಚಮಸಾಲಿ panchamasali peethaಪೀಠದ ವಿವಾದಗಳ ಕುರಿತು ಪಂಚಮಸಾಲಿ ಲಿಂಗಾಯತ ಸಮಾಜದ ಮುಖಂಡರು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬುಧವಾರ ಸಭೆ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸದ ನುಡಿ
ಹುಬ್ಬಳ್ಳಿ: ಕೂಡಲಸಂಗಮ ಹಾಗೂ ಹರಿಹರ ಪಂಚಮಸಾಲಿ ಪೀಠದಲ್ಲಿನ panchamasali peetha ಲೆಕ್ಕಪತ್ರದ ಬಗ್ಗೆ ಕೆಲವೊಂದು ಆರೋಪಗಳಿವೆ. ಎರಡೂ ಕಡೆಯ ಮುಖಂಡರನ್ನು ಕರೆಯಿಸಿ ಮಾತನಾಡಿದ್ದೇವೆ. ಶೇ. 90ರಷ್ಟು ಸಮಸ್ಯೆಗಳು ಬಗೆಹರಿದಿವೆ. ಮೂರ‌್ನಾಲ್ಕು ಸಭೆಯ ನಂತರ ತಾರ್ಕಿಕ ಅಂತ್ಯ ಕಾಣಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ನಗರದ ಹೋಟೆಲ್ ಡೆನಿಸನ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪಂಚಮಸಾಲಿ ಪೀಠದ ವಿವಾದಗಳ ಕುರಿತಾದ ಪಂಚಮಸಾಲಿ ಲಿಂಗಾಯತ ಸಮಾಜದ ಮುಖಂಡರ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಮಾಜಕ್ಕೆ ಧಕ್ಕೆಯಾಗುವಂಥ ಅಹಿತಕರ ಘಟನೆಗಳು ನಡೆದಿವೆ. ಹಾಗಾಗಿಯೇ ನಮ್ಮ ಸಮಾಜದವರು ಒಗ್ಗೂಡಬೇಕು ಎಂಬ ದೃಷ್ಟಿಯಿಂದ ಸಭೆ ಮಾಡಿದ್ದೇವೆ. ಸ್ವಾಮೀಜಿಗಳು ಮತ್ತು ಮುಖಂಡರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು. ಈಗ ಬಗೆಹರಿದಿವೆ. ಯಾವ ರೀತಿಯಲ್ಲಿ ಸಮಾಜ ಸಾಗಬೇಕು ಎಂಬುದರ ಕುರಿತು ಸಲಹೆಗಳನ್ನೂ ನೀಡಿದ್ದಾರೆ ಎಂದು ವಿವರಿಸಿದರು.
ರಾಜಕೀಯ ನಾಯಕರ ಹೊರತಾಗಿ ಸಮಿತಿ ರಚಿಸಿದ್ದೇವೆ. ಲೆಕ್ಕಪತ್ರದ ವಿಷಯ ಚರ್ಚಿಸಲು ಮುಂದಿನ ದಿನಗಳಲ್ಲಿ ದಿನಾಂಕ ನಿಗದಿಪಡಿಸಿ, ಗೊಂದಲಗಳಿಗೆ ತಿಲಾಂಜಲಿ ಹಾಡಲಾಗುವುದು. ಇಂದು ನಡೆದ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಎರಡೂ ಬಣದವರು ಒಪ್ಪಿಗೆ ಸೂಚಿಸಿದ್ದಾರೆ. ಪಂಚಮಸಾಲಿ ಪೀಠಗಳು ಎರಡೇ ಇರಲಿವೆ. ನಮ್ಮ ಮುಂದೆ ಮತ್ತೊಂದು ಪೀಠ ಸ್ಥಾಪನೆ ಮಾಡುವ ಬಗ್ಗೆ ಯಾವುದೇ ವಿಚಾರಗಳಿಲ್ಲ. ಇದ್ದ ಮಠಗಳನ್ನು ಸುಧಾರಣೆ ಮಾಡುವುದೇ ನಮ್ಮ ಗುರಿ. ಪಂಚಪೀಠಗಳ ಸ್ಥಾಪನೆ ನಮ್ಮ ಮುಂದೆ ಇಲ್ಲ ಎಂದರು.
ಸಭೆಯಲ್ಲಿ ಎರಡೂ ಬಣಗಳ ಸಾಕಷ್ಟು ಮನಸ್ತಾಪಗಳು ತಿಳಿಯಾಗಿವೆ. ನಮಗೆ ಸಮಾಜ ಮುಖ್ಯ. ಸಮಾಜಕ್ಕೆ ಗುರುಗಳ ಮಾರ್ಗದರ್ಶನ ಅಗತ್ಯ. ಮೊದಲು ಇಡೀ ಸಮಾಜ ಒಂದಾಗಬೇಕು. ಮುಂದೆ ಎರಡೂ ಪೀಠದ ಸ್ವಾಮೀಜಿಗಳ ಬಗ್ಗೆ ಚಿಂತಿಸುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಪೀಠಗಳನ್ನು ಮಾಡಲಾಗಿದೆ. ಪೀಠಗಳಲ್ಲಿ ಕೆಲ ಗೊಂದಲ, ಮನಸ್ತಾಪವಾಗಿದೆ. ಹೀಗಾಗಿ ನಾವು ಪಕ್ಷಾತೀತವಾಗಿ ಸೇರಿ ಇಂದು ಸಭೆ ಮಾಡಿದ್ದೇವೆ. ಗೊಂದಲಗಳ ನಿವಾರಣೆಗೆ ಸಮಿತಿ ರಚಿಸಿದ್ದೇವೆ. ಸತ್ಯಾಸತ್ಯತೆ ಅರಿತು ಸಮಸ್ಯೆ ಬಗೆಹರಿಸುತ್ತೇವೆ. ಈ ಬಗ್ಗೆ ಎರಡು ಪೀಠದವರು ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಮುಂದೆ ಯಾವುದೇ ಭಿನ್ನಾಪ್ರಾಯಗಳು ಇರುವುದಿಲ್ಲ. ಲೆಕ್ಕಪತ್ರದ ಬಗ್ಗೆ ಸಮಸ್ಯೆಗಳು ಇವೆ. ಎಲ್ಲ ಲೆಕ್ಕಪತ್ರಗಳನ್ನು ಎರಡೂ ಕಡೆಯವರು ತಂದಿದ್ದಾರೆ. ಅವುಗಳನ್ನು ಪರಿಶೀಲಿಸುತ್ತೇವೆ. ಹಂತ ಹಂತವಾಗಿ ಸಭೆಗಳನ್ನು ಮಾಡಿ ಗೊಂದಲಗಳನ್ನು ನಿವಾರಿಸಿಕೊಳ್ಳುತ್ತೇವೆ ಎಂದರು.
ಪಂಚಮಸಾಲಿ ಸಮಾಜದ ಪಂಚಪೀಠಗಳನ್ನು ಮಾಡುತ್ತೇವೆ. ಅದರಲ್ಲಿ ಒಂದು ಮಹಿಳಾಪೀಠವೂ ಇರಲಿದೆ. ಇದರ ಉದ್ದೇಶ ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟುವುದಲ್ಲ. 80 ಲಕ್ಷ ಜನರಿಗೆ ಒಂದೇ ಪೀಠ ಇದ್ದರೆ ಎಲ್ಲರೂ ಒಂದೇ ಕಡೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಜನರಿಗೆ ಲಭ್ಯವಾಗುವಂತೆ ಪೀಠಗಳನ್ನು ಮಾಡುತ್ತೇವೆ. ಐದು ಪೀಠಗಳು ಅಣ್ಣ-ತಮ್ಮಂದಿರಂತೆ ಇರಬೇಕು ಎಂಬುದಾಗಿದೆ. ಇಲ್ಲಿ ಯಾವುದೇ ಪೀಠ ದೊಡ್ಡದು, ಸಣ್ಣದು ಎಂಬುದಿರುವುದಿಲ್ಲ. ಮೊದಲು ಎರಡು ಪೀಠಗಳ ಗೊಂದಲಗಳು ನಿವಾರಣೆಯಾಗಲಿ. ನಂತರ ಪೀಠಗಳ ಸ್ಥಾಪನೆ ಬಗ್ಗೆ ಮಾತನಾಡುತ್ತೇವೆ ಎಂದರು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ಸಿ.ಸಿ. ಪಾಟೀಲ, ಪ್ರಮುಖರಾದ ಸೋಮಣ್ಣ ಬೇವಿನಮರದ, ಅರುಣಕುಮಾರ ಇತರರು ಸಭೆಯಲ್ಲಿದ್ದರು.