ಪಂಚಾಕ್ಷರಿ ಗದಗ ಘರಾನಾ ಸಮ್ಮೇಳನ 22ಕ್ಕೆ gharana

gharana ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ಪಂ. ರಾಜಗುರು ಗುರುಸ್ವಾಮಿ ಕಲಿಕೇರಿ.
gharana ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ಪಂ. ರಾಜಗುರು ಗುರುಸ್ವಾಮಿ ಕಲಿಕೇರಿ.
Published on

ಪ್ರಮುಖ ಮುಖ್ಯಾಂಶಗಳು

  • ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ.
  • ಖ್ಯಾತ ಗಾಯಕ ಡಾ. ವಿನಾಯಕ ತೊರವಿ ಅವರಿಗೆ ಗುರುಕುಮಾರ ಪಂಚಾಕ್ಷರಿ ಸಮ್ಮಾನ-2026 ಪ್ರಶಸ್ತಿ ಪ್ರದಾನ.
  • ಸಂಗೀತಗಾರ ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಉದ್ಘಾಟಿಸುವರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿ ಅಧ್ಯಕ್ಷ ಪಂ. ರಾಜಗುರು ಗುರುಸ್ವಾಮಿ ಕಲಿಕೇರಿ, ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಅಂದು ಬೆಳಗ್ಗೆ 10 ಗಂಟೆಗೆ ಧಾರವಾಡದ ಪ್ರಸಿದ್ಧ ಸಂಗೀತಗಾರ ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಉದ್ಘಾಟಿಸುವರು. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮಿತಿ ಉಪಾಧ್ಯಕ್ಷ ಶ್ರೀ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಸಮ್ಮುಖ ವಹಿಸುವರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗದಗ ಸಹಾಯಕ ಉಪ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಡಾ. ಎಸ್.ಪಿ. ಬಳಿಗಾರ, ಸಂಭಾಜಿ ಕಲಾಲ, ಡಾ. ಉದಯಕುಮಾರ ದೇಸಾಯಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹುಬ್ಬಳ್ಳಿಯ ನಾಟ್ಯ ಕಲಾವಿದ ಪಂ. ಗದಿಗೆಯ್ಯ ಹಿರೇಮಠ, ಚನ್ನಗಿರಿಯ ಸಂಗೀತ ಶಿಕ್ಷಕ ಪಂ. ಮಹಾಂತಯ್ಯ ಹಿರೇಮಠ ಕಲ್ಲೂರ, ಬೆಂಗಳೂರಿನ ಸಂಗೀತ ಶಿಕ್ಷಕ ರೇವಣಸಿದ್ದಯ್ಯ ಎ.ಎಂ.ಆರ್., ಶಿವಾಚಾರ್ಯ ಹೊಸಳ್ಳಿಮಠ ಹಾಗೂ ಕಳಕಪ್ಪ ಮುದ್ಲಾಪೂರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ವಿವರಿಸಿದರು. ಬೆಳಗ್ಗೆ 11ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಘರಾನಾ ಸಮ್ಮೇಳನದಲ್ಲಿ ಕಲಾವಿದರಾದ ಡಾ. ರಾಜಗುರು ಗುರುಸ್ವಾಮಿ, ಪಂ. ಬಾಲಚಂದ್ರ ನಾಕೋಡ, ಪಂ. ಶಿವಕುಮಾರ ಹಿರೇಮಠ, ಪಂ. ಕುಮಾರ ಮರಡೂರ, ಡಾ. ಹನುಮಂತ ಬುರ್ಲಿ, ಡಾ. ಶಿವಬಸವಯ್ಯ ಗಡ್ಡದಮಠ ಅವರಿಂದ ಗಾಯನ, ಉಸ್ತಾದ ಪಂ. ಶಫೀಕ್​ಖಾನ ಹಾಗೂ ಪ್ರವೀಣ ಹೂಗಾರ ಅವರಿಂದ ದ್ವಂದ್ವ ಸಿತಾರ ವಾದನ, ಶಾಂತಲಿಂಗ ಹೂಗಾರ, ಮಳೆಮಲ್ಲೇಶ ಹೂಗಾರ ಹಾಗೂ ರಘುನಂದನಗೋಪಾಲ ಹೂಗಾರ ಅವರಿಂದ ತಬಲಾ ಸೋಲೋ, ಪಂ. ಮಂಜುನಾಥ ಭಟ್ ಹಾಗೂ ವಿರೂಪಾಕ್ಷಯ್ಯ ಹೊಸಳ್ಳಿಮಠ ಅವರಿಂದ ಬಾನ್ಸೂರಿ ಜುಗಲಬಂದಿ ನಡೆಯಲಿದೆ. ಇನ್ನೂ ಹಲವಾರು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಜೆ 6 ಗಂಟೆಯ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಗಾಯಕ ಡಾ. ವಿನಾಯಕ ತೊರವಿ ಅವರಿಗೆ ಗುರುಕುಮಾರ ಪಂಚಾಕ್ಷರಿ ಸಮ್ಮಾನ-2026 ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ರಿಯಲ್ ಎಸ್ಟೇಟ್ ಉದ್ಯಮಿ ವಿನಾಯಕ ಹಬೀಬ ಹಾಗೂ ಶಂಕರಸಾ ಬದಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net